Advertisement

50 ಸಾವಿರ ದಂಡ ವಿಧಿಸಿದ ಎನ್‌ಜಿಟಿ 

11:49 AM Jul 04, 2018 | Team Udayavani |

ನವದೆಹಲಿ: ಕರ್ನಾಟಕ, ಮಣಿಪುರ ಸರ್ಕಾರಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಲಾ 50 ಸಾವಿರ ರೂ.ದಂಡ ವಿಧಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ವ್ಯಾಪ್ತಿಯಲ್ಲಿ ಹಸಿರು ಪ್ರಮಾಣ ಹೆಚ್ಚು ಮಾಡುವ ನಿಟ್ಟಿನಲ್ಲಿ ಗಿಡಗಳನ್ನು ನೆಟ್ಟಿರುವ ಬಗ್ಗೆ ಹೇಳಿಕೆ ದಾಖಲಿಸಿದೇ ಇರುವುದಕ್ಕಾಗಿ ಎನ್‌ಜಿಟಿ ಈ ಕ್ರಮ ಕೈಗೊಂಡಿದೆ.

Advertisement

ಪ್ರಭಾರ ಅಧ್ಯಕ್ಷ ನ್ಯಾ.ಜವೇದ್‌ ರಹೀಂ ನೇತೃತ್ವದ ಪೀಠ ಹೆದ್ದಾರಿ ಮೇಲ್ದರ್ಜೆಗೆ ಏರಿಸುವ ಸಂದರ್ಭದಲ್ಲಿ ಎಷ್ಟು ಮರಗಳನ್ನು ಕಡಿಯಬೇಕಾಗುತ್ತದೆ. ಜತೆಗೆ ಎಷ್ಟು ಗಿಡ ನೆಡಲಾಗಿದೆ ಎಂಬ ಬಗ್ಗೆ ಹೇಳಿಕೆ ದಾಖಲಿಸಲು ಎರಡೂ ರಾಜ್ಯಗಳಿಗೆ ಸೂಚನೆ ನೀಡಿತ್ತು. ಆದರೆ, ಅದಕ್ಕೆ ರಾಜ್ಯಗಳು ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ. ವಾರದ ಒಳಗಾಗಿ ಅದನ್ನು ಪಾವತಿ ಮಾಡಬೇಕು ಎಂದೂ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next