Advertisement

ಪ್ರವಾಹ ಪೀಡಿತ ಸ್ಥಳಗಳಲ್ಲಿ ಕೇಂದ್ರ ತಂಡ ಅಧ್ಯಯನ ಅಶೋಕ್‌ ಜತೆ ಮಾಹಿತಿ ವಿನಿಮಯ

10:05 PM Dec 15, 2020 | mahesh |

ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿದ ಕೇಂದ್ರದ ತಂಡ ಮಂಗಳವಾರ ಕಂದಾಯ ಸಚಿವ ಆರ್‌.ಅಶೋಕ್‌ ಅವರನ್ನು ಭೇಟಿ ಮಾಡಿ ಮಾಹಿತಿ ವಿನಿಮಯ ಮಾಡಿಕೊಂಡಿತು.

Advertisement

ಕಲಬುರಗಿ, ವಿಜಯಪುರ, ಉಡುಪಿ ಜಿಲ್ಲೆಗಳಲ್ಲಿ ಅಧ್ಯಯನ ನಡೆಸಿದ್ದ ಮೂರು ತಂಡಗಳು ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಸಚಿವರಿಗೆ ತಾವು ಅಧ್ಯಯನ ನಡೆಸಿದ ಸಂದರ್ಭ ಸಂಗ್ರಹಿಸಿದ ಮಾಹಿತಿ ನೀಡಿದರು.

ಇದೇ ಸಂದರ್ಭ ರಾಜ್ಯ ಸರಕಾರ ಸಿದ್ಧಪಡಿಸಿದ್ದ ವರದಿಯನ್ನು ಸಚಿವರು ಕೇಂದ್ರ ತಂಡಕ್ಕೆ ನೀಡಿದ್ದು ಶೀಘ್ರ ಕೇಂದ್ರಕ್ಕೆ ವರದಿ ನೀಡಿ ನೆರವು ಬಿಡುಗಡೆಗೆ ಸಹಕರಿಸಲು ಮನವಿ ಮಾಡಿದರು.

ರಾಜ್ಯದಲ್ಲಿ ಒಟ್ಟಾರೆ ಪ್ರವಾಹದಿಂದ 20.87 ಲಕ್ಷ ಹೆಕ್ಟೇರ್‌ ಬೆಳೆ ಹಾನಿಯಾಗಿದ್ದು 18,290 ಕೋಟಿ ರೂ. ನಷ್ಟವಾಗಿದೆ. 48,637 ಮನೆಗಳು ಹಾನಿಯಾಗಿದ್ದು 466.25 ಕೋಟಿ ರೂ. ನಷ್ಟವಾಗಿದೆ. ಈ ಅವಧಿಯಲ್ಲಿ ಉಂಟಾದ ಪ್ರವಾಹದಿಂದ 15,410 ಕೋಟಿ ರೂ. ನಷ್ಟವಾಗಿದ್ದು ಎನ್‌ಡಿಆರ್‌ಎಫ್ ಮಾರ್ಗಸೂಚಿಯಡಿ 1,629.24 ಕೋಟಿ ರೂ. ಆರ್ಥಿಕ ನೆರವು ಕೋರಿ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next