Advertisement

ಕಾರ್ನಾಡ್‌ ಚಿತ್ರ ಪ್ರದರ್ಶಿಸಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿರುವ ಎನ್‌ಎಫ್‌ಎಐ

05:11 PM Jun 13, 2019 | Vishnu Das |

ಪುಣೆ: ನ್ಯಾಷನಲ್‌ ಫಿಲ್ಮ್‌ ಆಚೀìವ್‌ ಆಫ್‌ ಇಂಡಿಯಾ (ಎನ್‌ಎಫ್‌ಎಐ) ಶನಿವಾರ ಇಲ್ಲಿ ಖ್ಯಾತ ನಾಟಕಕಾರ ದಿವಂಗತ ಗಿರೀಶ್‌ ಕಾರ್ನಾಡ್‌ ಅವರ ಕೆಲವು ಪ್ರಸಿದ್ಧ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಿದೆ.

Advertisement

ಕಾರ್ನಾಡ್‌ ಅವರು ನಟಿಸಿರುವ ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡ್ತಿ, ಕಾಡು ಮತ್ತು ಜಬ್ಬರ್‌ ಪಟೇಲ್‌ ಅವರ ಉಂಬರ್ಥ ಚಿತ್ರಗಳ ಪ್ರದರ್ಶನ ನಡೆಯಲಿದೆ. ಸಾಹಿತ್ಯ, ರಂಗಮಂದಿರ ಮತ್ತು ಸಿನೆಮಾ ಜಗತ್ತಿನಲ್ಲಿ ಹೆಸರುವಾಸಿಯಾಗಿದ್ದ ಬಹುಮುಖ ಪ್ರತಿಭಾಶಾಲಿ ಕಾರ್ನಾಡ್‌ (81) ಅವರು ದೀರ್ಘ‌ಕಾಲದ ಅನಾರೋಗ್ಯದ ಬಳಿಕ ಸೋಮವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ. 5 ದಶಕಗಳಿಗಿಂತಲೂ ಹೆಚ್ಚಿನ ಅವಧಿಯ ತನ್ನ ವೃತ್ತಿಜೀವನದಲ್ಲಿ ಕಾರ್ನಾಡ್‌ ಅವರು ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದರು. ನಾಟಕಕಾರನಾಗಿ ವೃತ್ತಿಜೀ ವನವನ್ನು ಪ್ರಾರಂಭಿಸಿದ್ದ ಅವರು ಚಿತ್ರನಿರ್ಮಾಣ, ಚಿತ್ರಕಥೆ, ನಿರ್ದೇಶನ ಮತ್ತು ನಟನೆಯಂತಹ ಹಲವಾರು ಅಂಶಗಳಲ್ಲಿ ಪರಿಣತರಾಗಿದ್ದರು ಎಂದು ಎನ್‌ಎಫ್‌ಎಐ ಮಂಗಳವಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ನಾಡ್‌ ಅವರ ಚಿತ್ರಗಳು ಸಮಕಾಲೀನ ವಿಷಯಗಳೊಂದಿಗೆ ಸಮ್ಮಿಶ್ರ ಗ್ರಾಮೀಣತೆ, ಇತಿಹಾಸ ಮತ್ತು ಪೌರಾಣಿಕ ವಿಚಾರಗಳಿಂದ ಕೂಡಿವೆ ಎಂದು ಅದು ತಿಳಿಸಿದೆ.

ಒಂದು ಮಹಾಕಾವ್ಯ ಚಿತ್ರವಾಗಿರುವ ಒಂದಾನೊಂದು ಕಾಲದಲ್ಲಿ (1978) ಚಿತ್ರವು ಕುರೊಸೋವಾ ಅವರ ಸ್ಯಾಮುರಾಯ್‌ ಚಲನಚಿತ್ರಗಳಿಗೆ ಕಾರ್ನಾಡ್‌ ಅವರ ಗೌರವಾರ್ಪಣೆಯಾಗಿತ್ತು. ಈ ಚಲನಚಿತ್ರವು ದಕ್ಷಿಣ ಭಾರತೀಯ ಸಮರ ಕಲೆಗಳ ತಂತ್ರವನ್ನು ಮುಖ್ಯವಾಗಿ
ಕೇರಳ ಮೂಲದ ಕಲರಿಪಾಯೆಟ್‌ ಅನ್ನು ‌ುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತದೆ. ಸಿನಿಮಾಟೋಗ್ರಫಿ ಮತ್ತು ಸ್ಟಂಟ್‌ ಸೀಕ್ವೆನ್ಸ್‌ಗಾಗಿ ಈ ಚಿತ್ರವು 26ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಕನ್ನಡ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದಿದೆ ಎಂದು ಎನ್‌ಎಫ್‌ಎಐ ಪ್ರಕಟನೆ ತಿಳಿಸಿದೆ.

ಕಾನೂರು ಹೆಗ್ಗಡ್ತಿ (1999) ಚಿತ್ರವು ಚಲನಚಿತ್ರ ನಿರ್ದೇಶನಕ್ಕೆ ಕಾರ್ನಾಡ್‌ ಅವರ ಪುನರಾಗಮನವನ್ನು ಸೂಚಿಸುತ್ತದೆ. ರಾಷ್ಟ್ರಕವಿ ಕುವೆಂಪು ಅವರ ಕಾನೂರು ಸುಬ್ಬಮ್ಮ ಹೆಗ್ಗಡ್ತಿ ಎಂಬ ಕಾದಂಬರಿಯನ್ನು ಆಧರಿಸಿರುವ ಈ ಚಿತ್ರವು ಇನ್ನೊಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಚಿತ್ರವಾಗಿದೆ ಎಂದು ಎನ್‌ಎಫ್‌ಎಐ ಹೇಳಿದೆ. ಕಾಡು (1973) ಕಾರ್ನಾಡ್‌ ಅವರ ಮೊದಲ ಏಕವ್ಯಕ್ತಿ ನಿರ್ದೇಶನದ ಚಿತ್ರವಾಗಿದೆ. ಉಂಬರ್ಥಾ (1981) ಜಬ್ಬರ್‌ ಪಟೇಲ್‌ ಅವರು ನಿರ್ದೇಶಿಸಿದ ಒಂದು ಪ್ರಸಿದ್ಧ ಮರಾಠಿ ಚಿತ್ರವಾಗಿದ್ದು ಕಾರ್ನಾಡ್‌ ಮತ್ತು ಸ್ಮಿತಾ ಪಾಟೀಲ್‌ ಅವರು ಇದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ¨ªಾರೆ. ಶನಿವಾರ ಪುಣೆಯ ಎನ್‌ಎಫ್‌ಎಐನಲ್ಲಿ ಚಿತ್ರಗಳ ಪ್ರದರ್ಶನದ ವೇಳೆ ಜಬ್ಬರ್‌ ಪಟೇಲ್‌ ಅವರು ಸ್ವತಃ ಉಪಸ್ಥಿತರಿರಲಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಆಲೋಚನೆಗಳು ಮತ್ತು ನೆನಪುಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next