Advertisement
2014 ಹಾಗೂ 2015ರಲ್ಲಿ ವಿಂಬಲ್ಡನ್ ಕಿರೀಟ ಏರಿಸಿಕೊಂಡಿದ್ದ ಸರ್ಬಿಯಾದ ನೊವಾಕ್ ಜೊಕೋ ವಿಕ್ ಸುಲಭದಲ್ಲಿ ದ್ವಿತೀಯ ಸುತ್ತು ತಲುಪಿದ್ದಾರೆ. ಸ್ಲೊವಾಕಿಯಾದ ಎದುರಾಳಿ ಮಾರ್ಟಿನ್ ಕ್ಲಿಝಾನ್ ಪಂದ್ಯದ ನಡುವೆ ಗಾಯಾಳಾದ್ದರಿಂದ ಹಿಂದೆ ಸರಿದರು. ಆಗ ಜೊಕೋವಿಕ್ 6-3, 2-0 ಮುನ್ನಡೆಯಲ್ಲಿದ್ದರು.
5ನೇ ಶ್ರೇಯಾಂಕದ ವಾವ್ರಿಂಕ ಅವರನ್ನು ಹಿಮ್ಮೆಟ್ಟಿಸಿದ ಸಾಹಸಿ ರಶ್ಯದ 21ರ ಹರೆಯದ ಡ್ಯಾನಿಲ್ ಮೆಡ್ವೆಡೇವ್. ಅಂತರ 6-4, 3-6, 6-4, 6-1. ವಿಶೇಷವೆಂದರೆ, ಇದು ಮೆಡ್ವೆಡೇವ್ ಅವರಿಗೆ ವಿಂಬಲ್ಡನ್ ಪಾದಾರ್ಪಣಾ ಪಂದ್ಯವಾಗಿರುವುದು! ವಿಶ್ವ ರ್‍ಯಾಂಕಿಂಗ್‌ನಲ್ಲಿ 49ನೇ ಸ್ಥಾನದಲ್ಲಿರುವ ಮೆಡ್ವೆಡೇವ್ ತನ್ನ 3ನೇ ಗ್ರ್ಯಾನ್‌ಸ್ಲಾಮ್ ಪಂದ್ಯಾ ವಳಿಯಲ್ಲಿ ದಾಖಲಿಸಿದ ಸ್ಮರಣೀಯ ಗೆಲುವು ಇದಾಗಿದೆ. 2 ಗಂಟೆ, 12 ನಿಮಿಷಗಳಲ್ಲಿ ಅವರು ವಾವ್ರಿಂಕ ಆಟಕ್ಕೆ ತೆರೆ ಎಳೆದರು. “ಈ ಗೆಲುವನ್ನು ಬಣ್ಣಿಸಲು ನನ್ನಲ್ಲಿ ಪದಗಳಿಲ್ಲ. ಈ ಪ್ರದರ್ಶನ ನನ್ನ ಬದುಕಿನುದ್ದಕ್ಕೂ ಹಸಿರಾಗಿರಲಿದೆ’ ಎಂದು ಮೆಡ್ವೆಡೇವ್ ಪ್ರತಿಕ್ರಿಯಿಸಿದರು. ವಾವ್ರಿಂಕ ಕಳೆದ ಫ್ರೆಂಚ್ ಓಪನ್ ಫೈನಲ್ ತನಕ ಸಾಗಿ ಅಲ್ಲಿ ರಫೆಲ್ ನಡಾಲ್‌ಗೆ ಸೋತಿದ್ದರು. ಮೆಡ್ವೆಡೇವ್ ಅವರಿನ್ನು ಬೆಲ್ಜಿಯಂನ ರುಬೆನ್ ಬೆಮಿಮನ್ಸ್ ವಿರುದ್ಧ ಆಡಲಿದ್ದಾರೆ.
Related Articles
2014ರ ವಿಂಬಲ್ಡನ್ ವನಿತಾ ಸಿಂಗಲ್ಸ್ ಫೈನಲಿಸ್ಟ್, ಕೆನಡಾದ ಯುಗೇನಿ ಬೌಶಾರ್ಡ್ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಅವರನ್ನು ಸ್ಪೇನಿನ ಅನುಭವಿ ಆಟಗಾರ್ತಿ ಕಾರ್ಲಾ ಸೂರೆಜ್ ನವಾರೊ 1-6, 6-1, 6-1 ಅಂತರದಿಂದ ಪರಾಭವಗೊಳಿಸಿದರು. ಅವರಿನ್ನು ಚೀನದ ಪೆಂಗ್ ಶುಯಿ ವಿರುದ್ಧ ಆಡುವರು. 3 ವರ್ಷಗಳ ಹಿಂದೆ ವಿಂಬಲ್ಡನ್ ಪ್ರಶಸ್ತಿ ಕಾಳಗ ದಲ್ಲಿ ಪೆಟ್ರಾ ಕ್ವಿಟೋವಾ ವಿರುದ್ಧ ಬೌಶಾರ್ಡ್ ಸೋಲ ನುಭವಿಸಿದ್ದರು. ಆಗ ವಿಶ್ವ ರ್‍ಯಾಂಕಿಂಗ್‌ನಲ್ಲಿ 5ನೇ ಸ್ಥಾನ ಅಲಂಕರಿಸಿದ್ದ ಬೌಶಾರ್ಡ್ ಈಗ 61ರಷ್ಟು ಕೆಳ ಕ್ರಮಾಂಕದಲ್ಲಿದ್ದಾರೆ.
ಫ್ರೆಂಚ್ ಓಪನ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ವಿಂಬಲ್ಡನ್‌ನಲ್ಲಿ ಗೆಲುವಿನ ಆರಂಭ ಕಂಡುಕೊಂಡಿದ್ದಾರೆ. ಬೆಲರೂಸ್‌ನ ಅಲೆಕ್ಸಾಂಡ್ರಾ ಸಾನ್ಸೋವಿಚ್ ಅವರನ್ನು 6-0, 1-6, 6-3ರಿಂದ ಮಣಿಸಿದರು.
Advertisement