Advertisement

Operation Mumbai 2.0? ಗುಪ್ತಚರ ವರದಿ ಹಿನ್ನೆಲೆಯಲ್ಲಿ ಡಿಸಿಎಂ ಬಾಂಬ್‌

11:36 PM Nov 08, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ ಸದ್ದು ಮಾಡುತ್ತಿದ್ದು, ಈಗಲೂ ಮುಂಬೈ ಕಾರಸ್ಥಾನವಾಗಿದೆ ಎನ್ನಲಾಗಿದೆ.

Advertisement

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ನೇತೃತ್ವದಲ್ಲಿ ಮಹಾರಾಷ್ಟ್ರದಲ್ಲಿ ಈ ಕುರಿತು ಸಭೆ ನಡೆದಿದೆ ಎಂಬ ಸುದ್ದಿಗಳ ಮಧ್ಯೆಯೇ, ಹೊಸದಿಲ್ಲಿಯಲ್ಲಿ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ. ಶಿವಕುಮಾರ್‌,  ಲೋಕಸಭಾ ಚುನಾವಣೆಗೆ ಮೊದಲೇ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆದಿದೆ. ನಾನು ಏನನ್ನೂ ಹೇಳಲಾರೆ.  ಅವರ ಪಕ್ಷದ, ನಾಯಕತ್ವದ ಪರಿಸ್ಥಿತಿ ಹದಗೆಟ್ಟಿದೆ. ಅದನ್ನು ಹೊರಗೆ ಹೇಳಿಕೊಳ್ಳಲು ಆಗದೆ, ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.

“ಬಿಜೆಪಿ ಎಷ್ಟೇ ಪ್ರಯತ್ನಿಸಿದರೂ ನಮ್ಮ ಒಬ್ಬ ಶಾಸಕರನ್ನೂ ಸೆಳೆಯಲು ಸಾಧ್ಯವಿಲ್ಲ’ ಎಂದರು. ಸರಕಾರ ಬೀಳಿಸಲು ನೂರಾರು ಯತ್ನ ನಡೆದಿವೆ.  ಈ ಬಗ್ಗೆ ಸಿಎಂಗೂ ಮಾಹಿತಿ ನೀಡಲಾಗಿದೆ ಎಂದರು. ನಮ್ಮಿಂದ ಹೋದವರೇ ಎಂದರು.

ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌, “ಬಹುಶಃ ಮುಂಬೈ ಗುಂಗು ಅವರನ್ನು ಕಾಡುತ್ತಿ ರಬೇಕು. ಮೊದಲು ನಿಮ್ಮ ಪಕ್ಷದ ಶಾಸಕರನ್ನು ಗೌರವಯುತವಾಗಿ ನಡೆಸಿಕೊಳ್ಳಿ’ ಎಂದಿದ್ದಾರೆ.

ಎಸ್‌ಟಿಎಸ್‌ ವರ್ಸಸ್‌ ಈಶ್ವರಪ್ಪ 
ಜಾಮೂನು ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳುವ ಬಿಜೆಪಿಯವರು ಅಧಿಕಾರ ಮುಗಿದ ಮೇಲೆ ವಿಷ ಕೊಡುತ್ತಾರೆ. ಕಾಂಗ್ರೆಸ್‌ ಪಕ್ಷದಲ್ಲಿದ್ದವನನ್ನು ಅವರಾಗಿಯೇ ಸೇರಿಸಿಕೊಂಡರು. ಈಗ ಸೋಮಶೇಖರ್‌ ಪಕ್ಷ ಬಿಟ್ಟರೆ ಬಿಡಲಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಬಿಜೆಪಿ ಮಾಜಿ ಶಾಸಕ

Advertisement

ಎಸ್‌.ಟಿ. ಸೋಮಶೇಖರ್‌
ಸೋಮಶೇಖರ್‌ ಸೇರಿ 17 ಶಾಸಕರು ಬಿಜೆಪಿಗೆ ಬಂದಿದ್ದರು. ಸೋಮಶೇಖರ್‌ ವಿಷ ಕುಡಿದಿದ್ದಾರಾ? ಅದು ಹೇಗೆ ಸಾಧ್ಯ? ಬೊಮ್ಮಾಯಿ ಸಿಎಂ ಆದಾಗ ವಿಷ ಕೊಟ್ಟಿದ್ದೇವಾ? ಆಗ ಅನೇಕರು ಜಾಮೂನ್‌ ತಿಂದಿದ್ದಾರೆ ಎಂದಿದ್ದಾರೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ.

ರಿವರ್ಸ್‌ ಆಪರೇಷನ್‌
ಈ ತಿಂಗಳ 15ರಂದು ಬಿಜೆಪಿ ಹಾಗೂ ಜೆಡಿಎಸ್‌ನ ಕೆಲವು ನಾಯಕರು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರೇ ಬೇರೆ ಪಕ್ಷಗಳ ನಾಯಕರ ಸೇರ್ಪಡೆಯ ಸುಳಿವು ನೀಡಿದ್ದಾರೆ. ನ.14ರ ಸಂಜೆ ಯಾರು ಸೇರಿಕೊಳ್ಳಲಿದ್ದಾರೆ ಎಂಬ ಮಾಹಿತಿ ಕೊಡುವುದಾಗಿ ಡಿಸಿಎಂ ಹೇಳಿದ್ದಾರೆ.

ಬಿಜೆಪಿ ಸಂಪರ್ಕದಲ್ಲಿ 45 ಶಾಸಕರು
ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸಹ ಬಾಂಬ್‌ ಸಿಡಿಸಿದ್ದು, ಕಾಂಗ್ರೆಸ್‌ನ 45 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ. ಇದನ್ನು ತಡೆಯಲು ಸಿಎಂ, ಡಿಸಿಎಂ ಬ್ರೆಕ್‌ಫಾಸ್ಟ್‌ ಮತ್ತು ಡಿನ್ನರ್‌ ಮೀಟಿಂಗ್‌ ಮಾಡುತ್ತಿದ್ದಾರೆ ಎಂದಿದ್ದಾರೆ. ಸಿಎಂ ಅವರೇ ಉಪಹಾರ ನೆಪದಲ್ಲಿ ಸಚಿವರ ಸಭೆ ಮಾಡಿ, ವಿಪಕ್ಷಗಳ 40ರಿಂದ 50 ಶಾಸಕರು, ಮುಖಂಡರನ್ನು ಕರೆತರುವ ಟಾಸ್ಕ್ ನೀಡಲಾಗಿದೆಯಂತೆ.

 

Advertisement

Udayavani is now on Telegram. Click here to join our channel and stay updated with the latest news.