Advertisement

ನನ್ನ ಬಣದವರೇ ಪಿಎಂ ಆಗಲಿ: ಓಲಿ ಪಟ್ಟು

09:21 AM Jul 18, 2020 | mahesh |

ಕಠ್ಮಂಡು: ಪ್ರಧಾನಿ ಕುರ್ಚಿಯ ಅಲುಗಾಟದ ನಡುವೆಯೇ ಕೆ.ಪಿ. ಶರ್ಮಾ ಓಲಿ, “ನನಗೆ ಬದಲಿ ಯಾರು?’ ಎಂಬ ಪ್ರಶ್ನೆಯನ್ನು ನೇಪಾಲದ ಕಮ್ಯುನಿಸ್ಟ್‌ ಪಕ್ಷದ ಮುಂದಿಟ್ಟಿದ್ದಾರೆ.

Advertisement

“ಒಂದು ವೇಳೆ ನನ್ನನ್ನು ಬದಲಿಸುವುದಾದರೆ, ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ನನ್ನ ಸಿಪಿಎನ್‌ (ಯುನೈಟೆಡ್‌ ಮಾರ್ಕ್ಸಿಸ್ಟ್‌- ಲೆನಿನಿಸ್ಟ್‌) ಬಣದಿಂದಲೇ ನೇಮಿಸಬೇಕು’ ಎಂದು ಓಲಿ ಪಟ್ಟುಹಿಡಿದಿದ್ದಾರೆ. ಓಲಿಯ ಈ ನಿರ್ಧಾರ ಪ್ರಚಂಡ ಅವರ ಸಿಪಿಎನ್‌ (ಮಾವೋಯಿಸ್ಟ್‌ ಸೆಂಟರ್‌) ಬಣವನ್ನು ಕೆರಳಿಸಿದೆ. 2018ರಲ್ಲಿ ಉಭಯ ಪಕ್ಷಗಳು ವಿಲೀನಗೊಂಡು ನೇಪಾಲ ಕಮ್ಯುನಿಸ್ಟ್‌ ಪಕ್ಷವನ್ನು ರಚಿಸಿದ್ದವು. “ಪ್ರಚಂಡ ಅವರ ವಿರೋಧದ ಬಾಣದಿಂದ ತಪ್ಪಿಸಿಕೊಳ್ಳಲು ಓಲಿ ಈ ತಂತ್ರ ರೂಪಿಸಿದ್ದಾರೆ. ಆದರೆ ಇದು ಫ‌ಲಿಸುವುದಿಲ್ಲ’ ಎಂದು ಎನ್‌ಸಿಪಿಯ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next