ವಾಷಿಂಗ್ಟನ್: ಮುಂದಿನ ನಾಲ್ಕರಿಂದ ಆರು ತಿಂಗಳ ಕಾಲ ಕೋವಿಡ್ 19 ಸೋಂಕು ಮತ್ತಷ್ಟು ಹೆಚ್ಚಳವಾಗಲಿದೆ ಎಂದು ಮೈಕ್ರೋಸಾಫ್ಟ್ ಕಂಪನಿ ಸ್ಥಾಪಕ ಬಿಲ್ ಗೇಟ್ಸ್ ಎಚ್ಚರಿಸಿರುವುದಾಗಿ ವರದಿ ತಿಳಿಸಿದೆ. ಗೇಟ್ಸ್ ಅವರ ಫೌಂಡೇಶನ್ ಕೋವಿಡ್ 19 ಲಸಿಕೆ ಅಭಿವೃದ್ಧಿ ಪಡಿಸಲು ಮತ್ತು ಲಸಿಕೆ ಸರಬರಾಜು ಮಾಡುವಲ್ಲಿ ಶ್ರಮಿಸುತ್ತಿರುವುದಾಗಿ ವರದಿ ತಿಳಿಸಿದೆ.
ಒಂದು ವೇಳೆ ನಾವು ಕೋವಿಡ್ ಮಾರ್ಗಸೂಚಿಯನ್ನು ನಿರ್ಲಕ್ಷಿಸಿದ್ದಲ್ಲಿ ಅಂದರೆ ಮಾಸ್ಕ್ ಧರಿಸದೇ ಇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಇನ್ನೂ 2 ಲಕ್ಷಕ್ಕಿಂತ ಹೆಚ್ಚು ಸಾವು ಸಂಭವಿಸಬಹುದು ಎಂದು ಇನ್ಸ್ ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಆ್ಯಂಡ್ ಎವಾಲ್ಯೂಷನ್(IHME) ಎಚ್ಚರಿಸಿತ್ತು.
ಇತ್ತೀಚೆಗೆ ಅಮೆರಿಕದಲ್ಲಿ ಕೋವಿಡ್ 19 ಸೋಂಕಿನ ಪ್ರಕರಣ ಹಾಗೂ ಸಾವು ಮತ್ತು ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀವ್ರ ಹೆಚ್ಚಳವಾಗುತ್ತಿದೆ. ಅಮೆರಿಕ ಈ ಪರಿಸ್ಥಿತಿಯನ್ನು ಚೆನ್ನಾಗಿ ನಿರ್ವಹಿಸಬಲ್ಲದು ಎಂಬುದಾಗಿ ನಾನು ತಿಳಿದಿರುವುದಾಗಿ ಹೇಳಿರುವ ಗೇಟ್ಸ್, 2015ರಲ್ಲಿಯೇ ಇಂತಹ ಸೋಮಕಿನಿಂದ ಜಗತ್ತಿನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲಿದೆ ಎಂದು ಭವಿಷ್ಯ ನುಡಿದಿದ್ದರು.
ಇದನ್ನೂ ಓದಿ:ಮೋಟೋ ಜಿ9 ಪವರ್…ಮೋಟೋದಿಂದ ಭಾರತದ ಮಾರುಕಟ್ಟೆಗೆ ಹೊಸ ಫೋನ್ ಗಳು
2015ರಲ್ಲಿ ನಾನು ಮುಖ್ಯವಾಗಿ ಮಾತನಾಡಿದ್ದು, ಜಗತ್ತಿನಾದ್ಯಂತ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ ಎಂದಿರುವ ಗೇಟ್ಸ್, ಇದೀಗ ಕೋವಿಡ್ ಸೋಂಕು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಾವು ಸಂಭವಿಸಲು ಕಾರಣವಾಗಲಿದೆ. ಆದರೆ ನಾವು ಇನ್ನು ಆ ಪರಿಸ್ಥಿತಿಗೆ ತಲುಪಿಲ್ಲ. ನನ್ನ ತುಂಬಾ ಅಚ್ಚರಿಗೆ ದೂಡಿದ್ದು, ನಾನು ಕಳೆದ 5 ವರ್ಷಗಳ ಹಿಂದೆ ಊಹಿಸಿದ್ದಕ್ಕಿಂತ ಹೆಚ್ಚಾಗಿ ಅಮೆರಿಕ ಮತ್ತು ಜಗತ್ತಿನಾದ್ಯಂತ ಆರ್ಥಿಕ ಪರಿಣಾಮ ಬೀರಿದೆ ಎಂದು ಬಿಲ್ ಗೇಟ್ಸ್ ಹೇಳಿದರು.