Advertisement

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

01:08 AM Sep 21, 2024 | Team Udayavani |

ಮುಂಬಯಿ: ಮಹಾರಾಷ್ಟ್ರದ ಮುಂದಿನ ಸಿಎಂ ಕಾಂಗ್ರೆಸ್‌ನವರೇ ಆಗಿರಲಿದ್ದಾರೆ ಎಂದು ಹಿರಿಯ ನಾಯಕ ಬಾಳಾಸಾಹೇಬ್‌ ಥೋರಟ್‌ ಹೇಳಿದ್ದು, ಭಾರೀ ಕುತೂಹಲಕ್ಕೆ ಕಾರಣ ವಾಗಿದೆ. ವಿಪಕ್ಷ ಮೈತ್ರಿಕೂಟ ಮಹಾವಿಕಾಸ ಅಘಾಡಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

ಇತ್ತೀಚೆಗೆ ಕಾರ್ಯಕ್ರಮವೊಂದ ರಲ್ಲಿ ಮಾತನಾಡಿದ ಥೋರಟ್‌, “ಮಹಾರಾಷ್ಟ್ರದ ಮುಂದಿನ ಸಿಎಂ ಕಾಂಗ್ರೆಸ್‌ನವರೇ ಆಗಲಿದ್ದಾರೆ. ಇದು ಶೇ.100ರಷ್ಟು ಖಚಿತ. ಇದನ್ನು ಸಾಕಾರಗೊಳಿ ಸಲು ಕಷ್ಟಪಟ್ಟು ಕೆಲಸ ಮಾಡಿ’ ಎಂದಿದ್ದಾರೆ. ಈ ಹೇಳಿಕೆ ಎಂವಿಎ ಮೈತ್ರಿಕೂಟದ ಭವಿಷ್ಯದ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next