ಮುಂಬಯಿ : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಲು ಕ್ರಿಕೆಟಿಗ ಸೌರವ್ ಗಂಗೂಲಿ ಸೂಕ್ತ ಅಭ್ಯರ್ಥಿ ಎಂದು ಹಿರಿಯ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಹೇಳಿದ್ದಾರೆ.
ಕ್ರಿಕೆಟ್ ರಂಗದಲ್ಲಿ ದೊಡ್ಡ ಪಾತ್ರ ವಹಿಸುವ ಶಕ್ತಿ ಸಾಮರ್ಥ್ಯ ಬಿಸಿಸಿಐಗೆ ಇದೆ; ಅಂತೆಯೇ ಇದರ ನೂತನ ಅಧ್ಯಕ್ಷರಾಗಲು ಕ್ರಿಕೆಟಿಗ ಸೌರವ್ ಗಂಗೂಲಿ ಸೂಕ್ತವಾದ ಅಭ್ಯರ್ಥಿ ನನಗೆ ಅನ್ನಿಸುತ್ತಿದೆ ಎಂಬುದಾಗಿ ಗಾವಸ್ಕರ್ ಎನ್‌ಡಿಟಿವಿಗೆ ಹೇಳಿದರು.
ಅತ್ಯಂತ ಕಠಿನಕರ ಸಮಯದಲ್ಲೂ ಭಾರತೀಯ ಕ್ರಿಕೆಟನ್ನು ಸಮರ್ಥವಾಗಿ ನಡೆಸಿದ ಕೀರ್ತಿ ಗಂಗೂಲಿ ಅವರಿಗಿದೆ. 1999-2000 ಇಸವಿಯ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿತ್ತು. ಆಗ ಗಂಗೂಲಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವವನ್ನು ವಹಿಸಲಾಗಿತ್ತು ಮತ್ತು ಅದನ್ನು ಅವರು ಸಮರ್ಥವಾಗಿ ಮತ್ತು ಯಶಸ್ವಿಯಗಿ ನಿಭಾಯಿಸಿದರು ಎಂದು ಗಾವಸ್ಕರ್ “ಪ್ರಿನ್ಸ್ ಆಫ್ ಕೋಲ್ಕತ’ ಆಗಿರು ದಾದಾ ಗೆ ತನ್ನ ಬೆಂಬಲ ಸೂಚಿಸಿದರು.
ಸುಪ್ರಿಂ ಕೋರ್ಟ್ ವರಿಷ್ಠ ನ್ಯಾಯಮೂರ್ತಿ ಟಿ ಎಸ್ ಠಾಕೂರ್ ಮತ್ತು ಜಸ್ಟಿಸ್‌ಗಲಾದ ಎ ಎಂ ಖಾನ್‌ವಿಲ್‌ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ನಿನ್ನೆಸೋಮವಾರ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರನ್ನು ಕಠಿನ ಶಿಸ್ತುಕ್ರಮದ ಭಾಗವಾಗಿ ಹುದ್ದೆಯಿಂದ ಉಚ್ಚಾಟಿಸಿತ್ತು. ಹಾಗಾಗಿ ಈಗ ಬಿಸಿಸಿಐ ಅಧ್ಯಕ್ಷ ಹುದ್ದೆ ಖಾಲಿ ಇದೆ.