Advertisement

Exam ಮುಂದಿನ 3 ತಿಂಗಳು ಸರಣಿ ನೇಮಕಾತಿ ಪರೀಕ್ಷೆ

11:34 PM Aug 02, 2024 | Team Udayavani |

ಬೆಂಗಳೂರು: ಆಗಸ್ಟ್‌, ಸಪ್ಟೆಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಸರಕಾರಿ ನೇಮಕಾತಿ ಪರೀಕ್ಷೆಗಳ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ತಿಳಿಸಿದ್ದಾರೆ.

Advertisement

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಎಂಜಿನಿಯರ್‌ ಹುದ್ದೆಗಳ ನೇಮಕಕ್ಕೆ ಆಗಸ್ಟ್‌ 11ರಂದು ಲಿಖಿತ ಪರೀಕ್ಷೆ ನಡೆಯಲಿದೆ.

ಜು.20ರಂದು ಪ್ರಾಧಿಕಾರ ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆಗೆ ಗೈರಾದವರಿಗೆ ಈ ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಬಿಎಂಟಿಸಿ (ಹೈದರಾಬಾದ್‌ ಕರ್ನಾಟಕೇತರ) ಪರೀಕ್ಷೆ ಸೆ.1ರಂದು, ಪಿಎಸ್‌ಐ ಪರೀಕ್ಷೆ ಸೆ. 22ರಂದು, ಗ್ರಾಮ ಆಡಳಿತಾಧಿಕಾರಿ ಮತ್ತು ಜಿಟಿಟಿಸಿಗೆ ಕಡ್ಡಾಯ ಕನ್ನಡ ಪರೀಕ್ಷೆ ಸೆ. 29ರಂದು ನಡೆಯಲಿದೆ. ಗ್ರಾಮ ಆಡಳಿತಾಧಿಕಾರಿ ಹುದ್ದೆ ಯ ಪ್ರಮುಖ ಪರೀಕ್ಷೆ ಅಕ್ಟೋಬರ್‌ 27ರಂದು ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಯುಜಿ ಸಿಇಟಿ ಆಪ್ಶನ್‌ ಪ್ರವೇಶಕ್ಕೆ ನಾಳೆಯೇ ಕೊನೆಯ ದಿನ
ಬೆಂಗಳೂರು: ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಯೋಗ ಮತ್ತು ನ್ಯಾಚುರೋಪತಿ, ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್‌ಗಳು, ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್‌ ಗಳ ಮೊದಲ ಸುತ್ತಿನ ಪ್ರವೇಶವನ್ನು ಆಗಸ್ಟ್‌ 4ರ ರಾತ್ರಿ 11.59ರ ಒಳಗೆ ದಾಖಲಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹೇಳಿದೆ.

ನಿಗದಿ ಪಡಿಸಿದ ಕೊನೆಯ ದಿನ ಮತ್ತು ಕೊನೆಯ ಸಮಯದಂದು ಸರ್ವರ್‌ನಲ್ಲಿ ದಾಖಲಾಗಿದ್ದ ಆಯ್ಕೆಗಳು ಮೊದಲ ಸುತ್ತಿಗೆ ಅಂತಿಮವಾಗಿರಲಿದ್ದು ಈ ಇಚ್ಛೆಗಳನ್ನು ಅಣಕು ಸೀಟು ಹಂಚಿಕೆಗೆ ಬಳಸಲಾಗುತ್ತದೆ ಎಂದು ಕೆಇಎ ಹೇಳಿದೆ. ಮೊದಲನೇ ಸುತ್ತಿನ ಅಣಕು ಸೀಟು ಹಂಚಿಕೆಯ ಫ‌ಲಿತಾಂಶವನ್ನು ಆಗಸ್ಟ್‌ 7ರ ರಾತ್ರಿ ಎರಡರ ಬಳಿಕ ಪ್ರಕಟಿಸಲಾಗುವುದು ಎಂದು ಕೆಇಎ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next