Advertisement
ಸೋಂಕು ಪೀಡಿತ ನ್ಯೂಯಾರ್ಕ್‌ಗೆ ಅನ್‌ಲಾಕ್ 2 ಭಾಗ್ಯದಾಖಲೆ ಮಟ್ಟದ ಸೋಂಕು ಪ್ರಕರಣಗಳು ದಾಖಲಾದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ನ್ಯೂಯಾರ್ಕ್‌ನಲ್ಲಿ ಇದೀಗ ಚೇತರಿಕೆಯ ಗಾಳಿ ಬೀಸ ತೊಡಗಿದೆ. ಅತಿಹೆಚ್ಚು ಸೋಂಕು ಪೀಡಿತರನ್ನು ಹೊಂದಿದ್ದ ವಿಶ್ವದ ದೊಡ್ಡ ಮಹಾನಗರಿಯಲ್ಲೀಗ ಸೋಂಕು ಪ್ರಸರಣ ಮಟ್ಟ ಕಡಿಮೆಯಾಗುತ್ತಿದ್ದು, ಈ ಹಿನ್ನಲೆಯಲ್ಲಿಯೇ ಲಾಕ್‌ಡೌನ್ ನಿಬಂಧನೆಗಳನ್ನು ಹಿಂದೆಗೆದುಕೊಳ್ಳುವುದಾಗಿ ಅಲ್ಲಿನ ಆಡಳಿತ ಅಧಿಕಾರಿಗಳು ತಿಳಿಸಿದ್ದಾರೆ. ಆ ಮೂಲಕ ಸೋಂಕಿನ ಬಾಧೆಯಿಂದ ಬಳಲಿದ್ದ ನ್ಯೂಯಾರ್ಕ್‌ಗೆ ಅನ್‌ಲಾಕ್.2 ಭಾಗ್ಯ ಲಭಿಸಿದ್ದು, ಮುಂಬರುವ ದಿನಗಳಲ್ಲಿ ದೇಶ ಎಂದಿನಂತಾಗಲಿದೆ ಎಂದು ಅಧಿಕಾರಿಗಳು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಲಾಕ್‌ಡೌನ್ ಜಾರಿಯಾದಾಗಿನಿಂದ ದೇಶದ ಅಭಿವೃದ್ಧಿ ದರ ಕಡಿತವಾಗಿದ್ದು, ನಿರುದ್ಯೋಗ ಸಮಸ್ಯೆಯೂ ಹೆಚ್ಚಳವಾಗುತ್ತಿದೆ. ಹಾಗಾಗಿ ಸರಕಾರ ಆರ್ಥಿಕತೆಯ ಹಿತದೃಷ್ಟಿಯಿಂದ ಮತ್ತು ಸಹಜ ಜೀವನಕ್ಕೆ ಮರಳುವ ದೃಷ್ಟಿಯಿಂದ ಲಾಕ್‌ಡೌನ್ ಸಡಿಲಿಕೆ ಮಾಡುತ್ತಿದ್ದು, ಆರ್ಥಿಕವಾಗಿ ದೇಶವನ್ನು ಸದೃಢಗೊಳಿಸುವ ಯೋಜನೆ ರೂಪಿಸುವುದಾಗಿ ತಿಳಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.