Advertisement

ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ: ದಿವಾಕರ ಮರಕಾಲ

03:45 AM Jul 04, 2017 | |

ಹೆಬ್ರಿ: ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ. ಪತ್ರಿಕೆಗಳು ಸಮಾಜದಲ್ಲಿ ನಡೆಯುತ್ತಿರುವ ಒಳಿತು ಕೆಡುಕುಗಳನ್ನು ತಿಳಿಸುವ ಕೆಲಸವನ್ನು ಮಾಡುತ್ತವೆ. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಪ್ರಕಟಿಸುವ ಮೂಲಕ ಅದನ್ನು ಪ್ರತಿಭಟಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ಸಮಾಜದಲ್ಲಿ ಉತ್ತಮ ಕೆಲಸಗಳನ್ನು ಎಲ್ಲರಿಗೂ ತಿಳಿಸುವ ಮೂಲಕ ಒಳ್ಳೆಯ ಕೆಲಸಗಳನ್ನು ಮಾಡುವಲ್ಲಿ ಜನರನ್ನು ಪ್ರೇರೇಪಿಸುತ್ತವೆ. 

Advertisement

ಸಮಾಜವು ಉತ್ತಮವಾಗಿ ರೂಪುಗೊಳ್ಳುವಲ್ಲಿ ಪತ್ರಿಕೆಗಳ ಪಾತ್ರ ಮಹತ್ವವಾದದ್ದು.  ಪತ್ರಿಕೆಗಳನ್ನು ಮನೆಬಾಗಿಲಿಗೆ ವಿತರಿಸುವ ಕಾಯಕದಲ್ಲಿರುವವರಿಗೆ ಅಭಿನಂದನೆ ಸಲ್ಲಿಸುವ ಜೇಸಿಐ ಕಾರ್ಯಕ್ರಮ ಶ್ಲಾಘನೀಯ ಎಂದು ಹೆಬ್ರಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ದಿವಾಕರ  ಮರಕಾಲ ಹೇಳಿದರು.

ಅವರು ಹೆಬ್ರಿ ಜೇಸಿಐ ಆಶ್ರಯದಲ್ಲಿ ಜೂ.30ರಂದು ಹೆಬ್ರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪತ್ರಿಕಾ ದಿನಾಚರಣೆಯ ಅಂಗವಾಗಿ ನಡೆದ ಪೇಪರ್‌ಗೊಂದಿಷ್ಟು ಕಲರ್‌ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಹೆಬ್ರಿ ವಲಯದ ಉದಯವಾಣಿ ವಿತರಕರಾದ ಪದ್ಮನಾಭ ನಾಯಕ್‌ ಹಾಗೂ ಸುಮತಿ ಎಸ್‌. ಬಡಿRಲಾಯ ಅವರನ್ನು ಸಮ್ಮಾನಿಸಿ ಮಾತನಾಡಿದರು.

ಅಂಕಣಕಾರ ಎಚ್‌ ಬಾಲಕೃಷ್ಣ ಮಲ್ಯ ಮಾತನಾಡಿ ಸ್ಪರ್ಧಾತ್ಮಕ ಪತ್ರಿಕೋದ್ಯಮ ಯುಗದಲ್ಲಿ  ಇಂದು ಸವಾಲುಗಳು ಹಲವಾರು ಕ್ಷಣಾರ್ಧದಲ್ಲಿ ಸುದ್ದಿ ಬಿತ್ತರಿಸುವ ಜವಾಬ್ದಾರಿ ಪತ್ರಕರ್ತರಿಗೆ ಇದೆ. ತಮ್ಮನ್ನು ಕುಟುಂಬದೊಂದಿಗೆ ಕಳೆಯುವ ಸಂತೋಷವನ್ನು ಬದಿಗೊತ್ತಿ ದಿನದ 24ಗಂಟೆ ಸುದ್ಧಿ  ಸಂಗ್ರಹಿಸುವ ಮತ್ತು ಕ್ಷಣಾರ್ಧದಲ್ಲಿ ಬಿತ್ತರಿಸುವ ಸವಾಲಿನ ಕಾಯಕದಲ್ಲಿ ತಮ್ಮ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಪತ್ರಕರ್ತರು ಅಭಿನಂದನಾರ್ಹರು ಎಂದರು. ಈ ಸಂದರ್ಭದಲ್ಲಿ ಹೆಬ್ರಿ ವಲಯದ ಪತ್ರಕರ್ತರನ್ನು ಗೌರವಿಸಲಾಯಿತು. ನ್ಯಾಯವಾದಿ ಕೃಷ್ಣ ಶೆಟ್ಟಿ, ಹೆಬ್ರಿ ಠಾಣಾ ಹೆಡ್‌ ಕಾನ್‌ಸ್ಟೆàಬಲ್‌ ಸುರೇಶ್‌ ಕುಮಾರ್‌ ಮಾತನಾಡಿದರು.

ಸಮಾರಂಭದಲ್ಲಿ  ಜೇಸಿಐ  ಕ್ರೀಡಾ ವಿಭಾಗಾಧಿಕಾರಿ ಪುಟ್ಟಣ್ಣ ಭಟ್‌, ಜೇಸಿರೇಟ್‌ ಅಧ್ಯಕ್ಷೆ ರಂಜಿತಾ ಪ್ರಭು ಮೊದಲಾದವರು ಉಪಸ್ಥಿತರಿದ್ದರು. 

Advertisement

ಹೆಬ್ರಿ ಜೇಸಿಐ ಅಧ್ಯಕ್ಷ ಪ್ರಶಾಂತ ಪೈ ಸ್ವಾಗತಿಸಿ, ಶಿಕ್ಷಕ ಪ್ರಕಾಶ್‌ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಜೇಸಿಐ ಕಾರ್ಯದರ್ಶಿ ನಾಗೇಂದ್ರ ಅವರು ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next