Advertisement

ಪಾರದರ್ಶಕ ಆಡಳಿತದಲ್ಲಿ ಪತ್ರಿಕೆ ಪಾತ್ರ ದೊಡ್ಡದು

03:33 PM Aug 20, 2022 | Team Udayavani |

ಔರಾದ: ಉತ್ತಮ ಹಾಗೂ ಪಾರದರ್ಶಕ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಪಶು ಸಂಗೋಪನಾ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ಪಟ್ಟಣದ ತಾಪಂ ಕಚೇರಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜನರು ಪತ್ರಿಕೆಗಳ ಮೇಲೆ ಅಪಾರ ನಂಬಿಕೆ ಇಟ್ಟಿದ್ದು, ಸುಂದರ ಸಮಾಜ ನಿರ್ಮಾಣದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಪಟ್ಟಣದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಅಶೋಕಕುಮಾರ ಕರಂಜಿ ಮಾತನಾಡಿ, ಗಡಿಯಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಪತ್ರಕರ್ತರ ಕಾಣಿಕೆ ಅಮೋಘವಾಗಿದೆ. ಸರ್ಕಾರ ವಿವಿಧ ರೀತಿಯಲ್ಲಿ ಪತ್ರಕರ್ತರಿಗೆ ನೆರವಾಗಬೇಕಿದೆ. ಪ್ರಸ್ತುತ ಸಮಾಜದಲ್ಲಿ ಅನೇಕ ಬಗೆಯ ಮಾಧ್ಯಮಗಳ ಪ್ರವೇಶವಾಗುತ್ತಿದ್ದರೂ ನಿಖರತೆ ಮತ್ತು ಸತ್ಯ ಸಂಗತಿಗಳ ಸುದ್ದಿಗಳಿಗೆ ಜನಮನ್ನಣೆ ಇದೆ ಎಂಬುದು ಅಲ್ಲಗಳೆಯುವಂತಿಲ್ಲ ಎಂದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿದರು. ವೇದಮೂರ್ತಿ ಗುರುಪಾದಯ್ಯ ಶಾಸ್ತ್ರಿ ಹಾನಗಲ್‌ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಮಲನಗರ ಹಾಗೂ ಔರಾದ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಪಪಂ ಅಧ್ಯಕ್ಷೆ ಅಂಬಿಕಾ ಪವಾರ್‌, ತಹಶೀಲ್ದಾರ್‌ ಮಲಶೆಟ್ಟಿ ಚಿದ್ರೆ, ಹಿರಿಯ ವರದಿಗಾರ ಅಪ್ಪಾರಾವ ಸೌದಿ, ತಾಪಂ ಇಒ ಬಿರೇಂದ್ರ ಸಿಂಗ್‌, ಸಿಪಿಐ ಮಲ್ಲಿಕಾರ್ಜುನ ಇಕ್ಕಳಕಿ, ಅನಿಲಕುಮಾರ ದೇಶಮುಖ, ಎಂ.ಪಿ ಮುದಾಳೆ, ಸಂತೋಷ ಚಟ್ಟೆ, ಸಂಘದ ತಾಲೂಕು ಅಧ್ಯಕ್ಷ ರವೀಂದ್ರ ಮುಕ್ತೆದಾರ್‌, ಕಮಲನಗರ ತಾಲೂಕು ಅಧ್ಯಕ್ಷ ಮನೋಜ ಹಿರೇಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಬಸವರಾಜ ಶಿವಪೂಜೆ, ಮಲ್ಲಪ್ಪ ಗೌಡ, ರಾಚಯ್ಯ ಸ್ವಾಮಿ, ಶ್ರೀಕಾಂತ ಹುಂಡೇಕರ್‌, ಅಮರೇಶ್ವರ ಚಿದ್ರೆ, ಅಮರ ಸ್ವಾಮಿ, ಅಂಬಾದಾಸ ನಳಗೆ, ಶಾಲಿವಾನ ಉದಗಿರೆ, ಬಾಲಾಜಿ ಅಮರವಾಡಿ, ಶಿವಕುಮಾರ ಬಿರಾದಾರ್‌, ಅಲಿಂ ಪಾಶಾ, ಸುಧೀರ ಪಾಂಡ್ರೆ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next