Advertisement

ಬಾಯಾರು ಪ್ರಶಾಂತಿ ವಿದ್ಯಾಕೇಂದ್ರ: ಈಜುಕೊಳ ಉದ್ಘಾಟನೆ

02:50 AM Jul 17, 2017 | Team Udayavani |

ವಿಟ್ಲ: ಹಳ್ಳಿ ಪ್ರದೇಶದಲ್ಲಿರುವಂತಹ ಶಾಲೆಯಲ್ಲಿ ಈಜುಕೊಳದ ನಿರ್ಮಾಣ ನಿಜಕ್ಕೂ ಶ್ಲಾಘನೀಯ. ದೈಹಿಕವಾಗಿ ಸದೃಢವಾಗಿರದೆ ಕೇವಲ ಬೌದ್ಧಿಕವಾಗಿ ಜ್ಞಾನವಂತರಾದರೆ ಪರಿಪೂರ್ಣತೆಯನ್ನು ಹೊಂದುವುದಿಲ್ಲ ಎಂದು ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆ ಅಧ್ಯಕ್ಷ ಯು. ಗಂಗಾಧರ ಭಟ್‌ ಹೇಳಿದರು. ಅವರು ಬಾಯಾರು ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲ್ಪಟ್ಟ ಈಜುಕೊಳವನ್ನು ಉದ್ಘಾಟಿಸಿ, ಮಾತನಾಡಿದರು.

Advertisement

ಮಕ್ಕಳ ದೈಹಿಕ ಮತ್ತು ಬೌದ್ಧಿಕ ಬೆಳವಣಿಗೆಗೆ ಈಜು ಕಲೆಯು ತುಂಬಾ ಸಹಕಾರಿಯಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡ ವಿದ್ಯಾಕೇಂದ್ರವು ಕೇವಲ ಪಠ್ಯ ವಿಷಯಗಳು ಮಾತ್ರವಲ್ಲದೆ ಪಠ್ಯೇತರ ವಿಷಯಗಳಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅವರ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ನಿಜಕ್ಕೂ ಹೆಮ್ಮೆ ಎಂದು ಅವರು ಹೇಳಿದರು. ಈಜುಕೊಳ ನಿರ್ಮಾಣ ಕಾರ್ಯದಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದ ಬೆಂಗಳೂರಿನ ನರೇಶ್‌ ಸ್ವಿಮ್ಮಿಂಗ್‌ ಆಕಾಡೆಮಿಯ ಪ್ರಧಾನ ತರಬೇತುದಾರ ಹಾಗೂ ತರುಣ್‌ ಅಸೋಸಿಯೇಟ್ಸ್‌ ನಿರ್ದೇಶಕ ಎಚ್‌.ಸಿ.ನರೇಶ್‌ ಅವರನ್ನು ಗೌರವಿಸಲಾಯಿತು.

ವೇ| ಮೂ| ಹಿರಣ್ಯ ವೆಂಕಟೇಶ್ವರ ಭಟ್‌ ಗಂಗಾಪೂಜೆ ನೆರವೇರಿಸಿದರು. ದ.ಕ. ದೈಹಿಕ ಶಿಕ್ಷಣ ಪರಿವೀಕ್ಷಕ ಗುರುನಾಥ ಬಾಗೇವಾಡಿ ಹಾಗೂ ಅಂತಾರಾಷ್ಟ್ರೀಯ ಕಬಡ್ಡಿಪಟು ಉದಯ ಚೌಟ ಮಾಣಿ ಶುಭಹಾರೈಸಿದರು. ಕೃಷ್ಣ ಭಟ್‌ ಅಳಿಕೆ, ನಾರಾಯಣ ರಾವ್‌ ಅಳಿಕೆ, ಪೆರ್ವಡಿ ಸದಾನಂದ ಆಳ್ವ, ಹಮೀದ್‌ ಕುಂಞಾಲಿ, ಗಣಪತಿ ಭಟ್‌ ಪದ್ಯಾಣ, ಟ್ರಸ್ಟಿಗಳಾದ ಪೆಲತ್ತಡ್ಕ ರಾಮಕೃಷ್ಣ ಭಟ್‌, ಕೃಷ್ಣ ಭಟ್‌ ಉಳುವಾನ, ಸದಾಶಿವ ಭಟ್‌ ಪಯ್ಯರಕೋಡಿ, ಅಡ್ವ ರಾಮಚಂದ್ರ ಭಟ್‌ ಮತ್ತು ಪ್ರಾಂಶುಪಾಲ ಅನೂಪ್‌ ಕೆ. ಮತ್ತಿತರರು ಉಪಸ್ಥಿತರಿದ್ದರು. ಮ್ಯಾನೇಜಿಂಗ್‌ ಟ್ರಸ್ಟಿ ಹಿರಣ್ಯ ಮಹಾಲಿಂಗ ಭಟ್‌ ಸ್ವಾಗತಿಸಿ, ಕೋಶಾಧಿಕಾರಿ ಮಾಣಿಪ್ಪಾಡಿ ನಾರಾಯಣ ಭಟ್‌ ವಂದಿಸಿದರು. ಅಧ್ಯಾಪಕ ಶ್ರೀಕಾಂತ್‌ ಆಚಾರ್ಯ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next