Advertisement

Man of The Hole…ಅಮೆಜಾನ್ ಕಾಡಿನಲ್ಲಿ ವಾಸವಾಗಿದ್ದ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿ ನಿಧನ

02:06 PM Aug 30, 2022 | Team Udayavani |

ಬ್ರೆಜಿಲ್: ವಿಶ್ವದ ಏಕಾಂಗಿ ವ್ಯಕ್ತಿ ಎಂದೇ ಕರೆಯಲ್ಪಡುತ್ತಿದ್ದ “ಅಮೆಜಾನ್ ಬುಡಕಟ್ಟು” ವ್ಯಕ್ತಿ ಅಮೆಜಾನ್ ದಟ್ಟಾರಣ್ಯದಲ್ಲಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈತ ಬ್ರೆಜಿಲ್ ನ ಅಮೆಜಾನ್ ಕಾಡಿನಲ್ಲಿ ಕಳೆದ 26 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದ.

Advertisement

ಇದನ್ನೂ ಓದಿ:ಅಬಕಾರಿ ನೀತಿ ಹಗರಣ: ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಖಚಿತ; ಪ್ರಹ್ಲಾದ್ ಜೋಶಿ

ದಿ ಗಾರ್ಡಿಯನ್ ವರದಿ ಪ್ರಕಾರ, ಈ ನಿಗೂಢ ವ್ಯಕ್ತಿ ಬ್ರೆಜಿಲ್ ನ ಅಜ್ಞಾತ ಬುಡಕಟ್ಟು ಜನಾಂಗದ ಕೊನೆಯ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದೆ. ಈತ ನೆಲದಲ್ಲಿ ಗುಹೆಯನ್ನು(ಮ್ಯಾನ್ ಆಫ್ ದಿ ಹೋಲ್)  ತೋಡಿ ಅದರೊಳಗೆ ಹೆಚ್ಚಿನ ಸಮಯ ಕಳೆಯುತ್ತಿರುವುದಾಗಿ ವರದಿ ವಿವರಿಸಿದೆ.

ಬುಡಕಟ್ಟು ವ್ಯಕ್ತಿಯ ಮೇಲ್ವಿಚಾರಣೆ ನಡೆಸುತ್ತ, ಮಾಹಿತಿ ಕಲೆ ಹಾಕುತ್ತಿದ್ದ ಬ್ರೆಜಿಲ್ ನ ಸ್ಥಳೀಯ ವ್ಯವಹಾರಗಳ ಸಂಸ್ಥೆ(ಫುನೈ) ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 23ರಂದು ಒಣಹುಲ್ಲಿನ ಗುಡಿಸಲಿನ ಹೊರಭಾಗದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ ಎಂದು ತಿಳಿಸಿದೆ.

ಈ ಪ್ರದೇಶದಲ್ಲಿ ಯಾವುದೇ ಹಿಂಸಾಚಾರ ನಡೆದ ಕುರುಹುಗಳು ಪತ್ತೆಯಾಗಿಲ್ಲ. ವಯೋ ಸಹಜ ಅನಾರೋಗ್ಯದಿಂದ ಈತ ಸಾವನ್ನಪ್ಪಿರಬಹುದು ಎಂದು ತಜ್ಞರು ಶಂಕಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬುಡಕಟ್ಟು ವ್ಯಕ್ತಿಗೆ ಅಂದಾಜು 60 ವರ್ಷವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೊಲಿವಿಯಾ ಗಡಿಯಲ್ಲಿರುವ ರೊಂಡೋನಿಯಾ ರಾಜ್ಯದ ಟಾನಾರು ಸ್ಥಳೀಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಏಕೈಕ ಬುಡಕಟ್ಟು ವ್ಯಕ್ತಿಯಾಗಿದ್ದಾನೆ ಎಂದು ಬಿಬಿಸಿ ವರದಿ ಮಾಡಿದೆ.

ಈತನನ್ನು ಸಂಪರ್ಕಿಸಬೇಕೆಂಬ ಎಲ್ಲಾ ಪ್ರಯತ್ನಗಳನ್ನು ಬುಡಕಟ್ಟು ವ್ಯಕ್ತಿ ನಿರಾಕರಿಸಿದ್ದ. ಈ ವ್ಯಕ್ತಿ ಯಾರನ್ನೂ ನಂಬುತ್ತಿರಲಿಲ್ಲವಂತೆ. ಹೀಗಾಗಿ ಎರಡು ದಶಕಕ್ಕಿಂತಲೂ ಹೆಚ್ಚಿನ ಕಾಲ ಒಬ್ಬಂಟಿಯಾಗಿಯೇ ಅಮೆಜಾನ್ ಕಾಡಿನಲ್ಲಿ ವಾಸ್ತವ್ಯ ಹೂಡಿದ್ದ. ಈತ ಯಾರನ್ನೂ ಸಂಪರ್ಕಿಸದಿರುವುದು ಯಾವ ಕಾರಣಕ್ಕೆ ಎಂಬುದು ಇಂದಿಗೂ ನಿಗೂಢವಾಗಿದೆ ಎಂದು ಬ್ರೆಜಿಲ್ ನ ಸಾಮಾಜಿಕ ಕಾರ್ಯಕರ್ತರ ಗುಂಪು ತಿಳಿಸಿದೆ.

ಬ್ರೆಜಿಲ್ ಫೆಡರಲ್ ಪೊಲೀಸರು ಬುಡಕಟ್ಟು ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಿದ್ದು, ನಂತರ ಸಾವಿನ ಕುರಿತ ಕಾರಣದ ವರದಿಯನ್ನು ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next