Advertisement

ಪ್ರೇಮ ಪ್ರಕರಣ: ಗೆಳತಿಯ ತಂದೆಯಿಂದ ಹುಡುಗನಿಗೆ ಗುಂಡೇಟು  ..?

12:28 PM Jul 15, 2022 | Team Udayavani |

ಬಿಹಾರ :  ಯುವಕನೊಬ್ಬನ ಮೇಲೆ ಆತನ ಗೆಳತಿಯ ತಂದೆ ಸೇರಿದಂತೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡು ಹಾರಿಸಿದ ಘಟನೆ  ಬಿಹಾರದ ಪುರ್ನಿಯಾ ಎಂಬಲ್ಲಿ ನಡೆದಿದೆ. ಯುವಕನನ್ನು ಖುಷ್ಕಿಬಾಗ್ ಬಾಗೇಶ್ವರ ಕಾಲೋನಿ ನಿವಾಸಿ ಕುನಾಲ್ ಎಂದು ಗುರುತಿಸಲಾಗಿದೆ.

Advertisement

ಯುವಕ ತನ್ನ ಮನೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರು ಆರೋಪಿಗಳು ಹಿಂದಿನಿಂದ ಬಂದು ನಿಲ್ಲಿಸಿ ಆತನ ತೊಡೆಗೆ ಗುಂಡು ಹಾರಿಸಿದ್ದಾರೆ, ತಕ್ಷಣ ಆತ ನೆಲಕ್ಕೆ ಬಿದ್ದಿದ್ದಾನೆ.

ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ಸ್ಥಳೀಯರು ಕುನಾಲ್ ಅವರನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇದನ್ನೂ ಓದಿ: ಗೊಟಬಯ ರಾಜೀನಾಮೆ ಅಂಗೀಕಾರ: ಏಳು ದಿನದಲ್ಲಿ ಲಂಕಾದ ನೂತನ ಅಧ್ಯಕ್ಷರ ಆಯ್ಕೆ: ಸ್ಪೀಕರ್

ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ತನ್ನ ಗೆಳತಿಯ ತಂದೆ ಮುನ್ನಾ ಪಾಸ್ವಾನ್ ಆಗಿದ್ದು, ಬೈಕ್‌ನಲ್ಲಿದ್ದ ಇನ್ನೊಬ್ಬ ವ್ಯಕ್ತಿಯನ್ನು ಗುರುತಿಸಲಾಗಲಿಲ್ಲ ಎಂದು ಕುನಾಲ್ ತನ್ನ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

Advertisement

2021 ರ ಜನವರಿಯಲ್ಲಿ ಪಾಸ್ವಾನ್ ತನ್ನ ವಿರುದ್ಧ ಅಪಹರಣದ ದೂರು ದಾಖಲಿಸಿದ್ದರು ಮತ್ತು ಅದಕ್ಕಾಗಿ ಅವರನ್ನು ಜೈಲಿಗೆ ಕಳುಹಿಸಲಾಯಿತು ಎಂದು ಈತ ಪೊಲೀಸರಿಗೆ ತಿಳಿಸಿದ್ದಾನೆ. 20 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಹೊರಬಂದಿದ್ದರು. ಅಂದಿನಿಂದ ಬಾಲಕಿಯ ತಂದೆ ಆತನಿಗೆ ಪದೇ ಪದೇ ಬೆದರಿಕೆ ಹಾಕುತ್ತಿದ್ದರು ಎನ್ನಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಇದರ ಹಿಂದೆ ಪೊಲೀಸರಿಗೆ ಪ್ರೇಮ ಪ್ರಕರಣವೊಂದರ ಸಂಬಂಧವಿರುವ ಅನುಮಾನ ಮೂಡಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next