Advertisement

ಜೂ.15ರಿಂದ ಶೈಕ್ಷಣಿಕ ವರ್ಷಾರಂಭವಿಲ್ಲ; 2021-22ನೇ ಸಾಲಿನ ನೂತನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

03:52 PM Jun 04, 2021 | Team Udayavani |

ಬೆಂಗಳೂರು: 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸರ್ಕಾರ ಈ ಹಿಂದೆ ಜೂನ್ 15ರ ದಿನಾಂಕ ಸೂಚಿಸಿತ್ತು. ಆದರೆ ಕೋವಿಡ್ ಕಠಿಣ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜೂ.14ರವರೆಗೆ ಮುಂದುವರಿಸಿದ ಕಾರಣ ಇದೀಗ ಶೈಕ್ಷಣಿಕ ವರ್ಷಾರಂಭದ ದಿನಾಂಕ ಬದಲಾವಣೆ ಮಾಡಿದ್ದು, ಜುಲೈ ಒಂದರಿಂದ ಶಾಲಾ ಚಟುವಟಿಕೆ ಆರಂಭಿಸಲು ಮರು ಆದೇಶ ಹೊರಡಿಸಿದೆ.

Advertisement

ಜುಲೈ ಒಂದರಿಂದ ರಾಜ್ಯದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಆರಂಭಿಸಲಾಗುವುದು. ಜು.1ರಿಂದ ಅ.10ರವರೆಗೆ ಮೊದಲ ಅವಧಿ ತರಗತಿಗಳು ಮತ್ತ ಅ.21ರಿಂದ ಮಂದಿನ ವರ್ಷದ ಎಪ್ರಿಲ್ 30ರವರೆಗೆ ಎರಡನೇ ಹಂತದ ತರಗತಿಗಳ ನಡೆಯಲಿದೆ.

ಅಕ್ಟೋಬರ್ 10ರಿಂದ 20ರ ವರೆಗೆ ದಸರಾ ರಜೆ ಘೋಷಿಸಲಾಗಿದೆ. 2022ರ ಮೇ 1ರಿಂದ ಮೇ 28ರವರೆಗೆ ಬೇಸಿಗೆ ರಜೆಯನ್ನು ನಿಗಧಿಪಡಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

ಇದನ್ನೂ ಓದಿ:ಕೋವಿಡ್ ಪರಿಸ್ಥಿತಿ ಸುಧಾರಣೆಯಾದರೆ ಮಾತ್ರ SSLC ಪರೀಕ್ಷೆ, ಇಲ್ಲದಿದ್ದರೆ ರದ್ದು: ಬಿಎಸ್ ವೈ

ಶಾಲಾ ಪ್ರವೇಶಾತಿ/ ದಾಖಲಾತಿಯನ್ನು ಜೂ.15ರಿಂದ ಆರಂಭಿಸಿ ಆಗಸ್ಟ್ 31ರ ಒಳಗೆ ಮುಕ್ತಾಯಗೊಳಿಸಬೇಕು. ಜು.1ರಿಂದ ಭೌತಿಕ ತರಗತಿಗಳು ಆರಂಭವಾಗದೇ ಇದ್ದಲ್ಲಿ ಆನ್ ಲೈನ್ ತರಗತಿಗಳು ಆರಂಭಿಸಲಾಗುವುದು ಎಂದು ಸೂಚಿಸಲಾಗಿದೆ.

Advertisement

ಮುಷ್ಕರ ಮುಂತಾದ ಕಾರಣಗಳಿಂದ ಶಾಲೆಗಳಿಗೆ ರಜೆ ಘೋಷಣೆಯಾದರೆ ಆ ಅವಧಿಯ ಶಾಲಾ ಕರ್ತ್ಯವ್ಯದ ದಿನಗಳನ್ನು ಮುಂದಿನ ರಜಾ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ತರಗತಿ ನಡೆಸುವುದರ ಮೂಲಕ ಸರಿದೂಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next