Advertisement

ರೆಮ್‌ಡೆಸಿವಿಯರ್‌ ಮಾರುವವರ ಬಂಧನಕ್ಕೆ ಸಿಎಂ ಸೂಚನೆ

12:52 PM Apr 30, 2021 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಲಸಿಕೆ ನೀಡಿಕೆ ಹಾಗೂ ರೆಮ್‌ಡೆಸಿವಿಯರ್‌ ಬಳಕೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು ಹಾಗೂ ಕಾಳಸಂತೆಯಲ್ಲಿ ಮಾರಾಟ ಮಾಡುವವರನ್ನು ಕೂಡಲೇ ಬಂಧಿಸುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ಹೇಳಿದರು.

Advertisement

ಮುಖ್ಯಮಂತ್ರಿಗಳು ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಲಸಿಕೆ ಹಾಕುವುದು ಹಾಗೂ ರೆಮ್‌ಡೆಸಿವಿಯರ್‌ ಬಳಕೆ ಬಗ್ಗೆ ಮೇಲ್ವಿಚಾರಣೆ ನಡೆಸಬೇಕು.

ಯಾರಿಗೆ ಲಸಿಕೆ ನೀಡಬೇಕು, ಯಾರಿಗೆ ರೆಮ್‌ಡೆಸಿವಿಯರ್‌ನೀಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮನಸೋ ಇಚ್ಛೆ ಔಷಧ ಬಳಸುತ್ತಿದ್ದು,ಅದನ್ನು ತಡೆಗಟ್ಟಬೇಕು. ತುರ್ತು ಅಗತ್ಯವಿದ್ದವರಿಗಷ್ಟೇ ರೆಮ್‌ಡೆಸಿವಿಯರ್‌ ನೀಡಬೇಕು.

ಕೆಲವೆಡೆ ಸಣ್ಣ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲೂ ನೀಡಲು ಮುಂದಾಗಿದ್ದಾರೆ. ಕಾಳಸಂತೆಯಲ್ಲೂ ಮಾರಾಟವಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದು ಹೇಳಿದರು.

ಎಲ್ಲ ಜಿಲ್ಲೆಗಳಲ್ಲಿ ಲಸಿಕೆ ಹಾಕಲು ಹಾಗೂ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಆಮ್ಲಜನಕ ಪೂರೈಕೆ ವ್ಯವಸ್ಥೆಕಲ್ಪಿಸಬೇಕು. ಆಮ್ಲಜನಕ ಪೂರೈಕೆ ಸೇರಿದಂತೆ ನಾನಾಸೇವೆ, ಚಟುವಟಿಕೆಗೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುತ್ತಿರುವ ವಾರ್‌ ರೂಮ್‌ಗಳಿಗೆ ನಿರಂತರಭೇಟಿ, ಮೇಲ್ವಿಚಾರಣೆ ನಡೆಸುವಂತೆಯೂ ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

Advertisement

ರಾಜ್ಯಾದ್ಯಂತ ಸ್ಮಶಾನಕ್ಕಾಗಿ 230 ಎಕರೆ ಭೂಮಿಯನ್ನು ತುರ್ತಾಗಿ ನೀಡಲು ಆದೇಶ ಹೊರಡಿಸಲಾಗಿದೆ. ಕೂಡಲೇ ಈ ಭೂಮಿಗಳನ್ನು ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೆ ಹಂಚಿಕೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನೊಂದೆಡೆ ಕೋವಿಡ್‌ನಿಂದ ಮೃತಪಟ್ಟವರನ್ನು ತಮ್ಮ ತೋಟ, ಜಮೀನುಗಳಲ್ಲಿ ನಿಯಮಗಳನುಸಾರ ಅಂತ್ಯಸಂಸ್ಕಾ ರಕ್ಕೆ ಅವ ಕಾಶ ಕಲ್ಪಿಸಲಾಗಿದೆ.

ಒಟ್ಟಾರೆ ಮೃತ ಸೋಂಕಿತರ ಅಂತ್ಯ ಸಂಸ್ಕಾರಕ್ಕಿದ್ದ ಎಲ್ಲ ಅಡೆತಡೆಗಳನ್ನು ಕಂದಾಯ ಇಲಾಖೆ ವತಿಯಿಂದ ನಿವಾರಿಸಲಾಗಿದೆ. ಒಂದೆರಡು ದಿನದಲ್ಲಿಮೃತರ ಅಂತ್ಯಕ್ರಿಯೆ ಪ್ರಕ್ರಿಯೆಯಲ್ಲಿನ ಸಮಸ್ಯೆಗಳುನಿವಾರಣೆಯಾಗಲಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next