Advertisement

ಟೈಟಾನ್ಸ್‌-ತಲೈವಾಸ್‌ ಮೊದಲ ಹಣಾಹಣಿ

03:35 AM Jun 29, 2017 | Team Udayavani |

ಮುಂಬೈ: ಪ್ರೊ ಕಬಡ್ಡಿ ಲೀಗ್‌ 5ನೇ ಆವೃತ್ತಿಯ ವೇಳಾ ಪಟ್ಟಿ ಬುಧವಾರ ಮುಂಬೈನಲ್ಲಿ ಪ್ರಕಟಿಸಲಾಗಿದೆ. ಜೂ.28ರಂದು ಕೂಟ ಆರಂಭವಾಗಲಿದೆ. ಅಕ್ಟೋಬರ್‌ 28 ರಂದು ಚೆನ್ನೈನಲ್ಲಿ ಕೂಟಕ್ಕೆ ತೆರೆ ಬೀಳಲಿದೆ.

Advertisement

ಈ ಬಾರಿ ತಮಿಳುನಾಡು, ಹರಿಯಾಣ, ಗುಜರಾತ್‌ ಮತ್ತು ಉತ್ತರ ಪ್ರದೇಶ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ. ಹೀಗಾಗಿ ಕೂಟದಲ್ಲಿ ತಂಡಗಳ ಸಂಖ್ಯೆ 8 ರಿಂದ 12ಕ್ಕೇರಿದೆ. ಒಟ್ಟು 12 ತಂಡಗಳಿಂದ 138 ಪಂದ್ಯಗಳು ನಡೆಯಲಿವೆ. 12 ತಂಡಗಳನ್ನು ಎ ವಲಯ ಮತ್ತು ಬಿ ವಲಯ ಎಂದು ಎರಡು ವಿಭಾಗ ಮಾಡಲಾಗಿದೆ. ಎ ವಲಯದಲ್ಲಿ ದಬಾಂಗ್‌ ಡೆಲ್ಲಿ, ಜೈಪುರ್‌ ಪಿಂಕ್‌ ಪ್ಯಾಂಥರ್, ಪುಣೆರಿ ಪಲ್ಟಾನ್ಸ್‌, ಯು ಮುಂಬಾ, ಹರ್ಯಾಣ ಸ್ಟೀಲರ್, ಗುಜರಾತ್‌ ತಂಡಗಳು ಸ್ಥಾನ ಪಡೆದರೆ, ಬಿ ವಲಯದಲ್ಲಿ ತೆಲುಗು ಟೈಟಾನ್ಸ್‌, ಬೆಂಗಳೂರು ಬುಲ್ಸ್‌, ಪಾಟ್ನಾ ಪಿರಾಟ್ಸ್‌, ಬೆಂಗಾಲ್‌ ವಾರಿಯರ್, ಯುಪಿ ಯೋಧಾ, ತಮಿಳು ತಲೈವಾಸ್‌ ತಂಡಗಳು ಸ್ಥಾನ ಪಡೆದಿವೆ. 

13 ವಾರಗಳ ಕಾಲ ನಡೆಯಲಿರುವ ಕೂಟದ ಲೀಗ್‌ನಲ್ಲಿ ಒಂದು ತಂಡ ತಲಾ 22 ಪಂದ್ಯಗಳನ್ನು ಆಡಲಿದೆ. ಲೀಗ್‌ನಲ್ಲಿ ಅಗ್ರ ಮೂರು ಸ್ಥಾನ ಪಡೆದ ಎರಡೂ ಗುಂಪಿನಿಂದಲೂ ತಲಾ 3 ತಂಡಗಳು ಮಾತ್ರ ಕ್ವಾಲಿಫೈಯರ್‌ ಹಂತವನ್ನು ತಲುಪಲಿವೆ. ಹೀಗಾಗಿ ಕ್ವಾಲಿಫೈಯರ್‌-1, ಕ್ವಾಲಿಫೈಯರ್‌-2, ಕ್ವಾಲಿಫೈಯರ್‌-3 ಪಂದ್ಯಗಳು ನಡೆಲಿವೆ. ಲೀಗ್‌ ಹಂತದಲ್ಲಿ ಎರಡೂ ಗುಂಪಿನಿಂದ ನಂ.1 ಸ್ಥಾನದೊಂದಿಗೆ ಕ್ವಾಲಿಫೈಯರ್‌ ಹಂತ ತಲುಪಿದ ತಂಡಗಳು ಕ್ವಾಲಿಫೈಯರ್‌ 3 ರಲ್ಲಿ ಸೆಣಸಲ್ಲಿದ್ದು, ಗೆದ್ದ ತಂಡ ನೇರವಾಗಿ ಫೈನಲ್‌ ತಲುಪಲಿದೆ. ಸೋತ ತಂಡಕ್ಕೆ ಎಲಿಮಿನೇಟರ್‌-2ದಲ್ಲಿ ಆಡುವ ಅವಕಾಶ ಸಿಗಲಿದೆ. ಇಲ್ಲಿ ಗೆದ್ದರೆ ಫೈನಲ್‌ಗೆ ಒಮ್ಮೆ ಸೋತರೆ ಕೂಟದಿಂದ ಹೊರಹೋಗಲಿದೆ.

ಆಗಸ್ಟ್‌ 4 ರಿಂದ ಬೆಂಗಳೂರು ಆವೃತ್ತಿ:
ಆ.4 ರಂದು ಬೆಂಗಳೂರು ಆವೃತ್ತಿಗೆ ಚಾಲನೆಸಿಗಲಿದೆ. 6 ದಿನಗಳ ಕಾಲ ನಡೆಯುವ ಆವೃತ್ತಿಗೆ ಆ.10 ರಂದು ತೆರೆಬೀಳಲಿದೆ. ಈ ಆವೃತ್ತಿಯಲ್ಲಿ ಬೆಂಗಳೂರು ತಂಡ ತಮಿಳು ತಲೈವಾಸ್‌ ತಂಡವನ್ನು 2 ಬಾರಿ ಮತ್ತು ಯುಪಿ ಯೋಧಾ, ಪಾಟ್ನಾ, ತೆಲುಗು ಟೈಟಾನ್ಸ್‌, ಬೆಂಗಾಳ ವಾರಿಯರ್ ತಂಡಗಳ ವಿರುದ್ಧ ತಲಾ ಒಂದು ಪಂದ್ಯವನ್ನು ಆಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next