ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ ಏಕಾಏಕಿ ಹೊಸದಾಗಿ 10 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 26ಕ್ಕೆ ಏರಿದೆ.
ಕಳೆದ ಎರಡು ತಿಂಗಳಿಂದ ಸಕ್ರಿಯ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿರಲಿಲ್ಲ. ಪ್ರತಿದಿನದ ಪ್ರಕರಣಗಳ ಸಂಖ್ಯೆ 5ನ್ನು ದಾಟಿರಲಿಲ್ಲ. ಕೋವಿಡ್ 2ನೇ ಅಲೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಹೆಚ್ಚಿರುವ ಬೆನ್ನಲ್ಲೇ ಜಿಲ್ಲೆಯಲ್ಲೂ ಪ್ರಕರಣಗಳು ಕ್ರಮೇಣ ಹೆಚ್ಚತೊಡಗಿವೆ.
ಬುಧವಾರ ಪತ್ತೆಯಾದ 10 ಪ್ರಕರಣಗಳಲ್ಲಿ, ಚಾಮರಾಜನಗರ ತಾಲೂಕಿನಿಂದ 3, ಹನೂರಿನಿಂದ 4, ಕೊಳ್ಳೇಗಾಲದಿಂದ 2 ಹಾಗೂ ಗುಂಡ್ಲುಪೇಟೆಯಿಂದ 1 ಪ್ರಕರಣ ವರದಿಯಾಗಿದೆ.
ಇದರೊಂದಿಗೆ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದಿಢೀರನೆ 26ಕ್ಕೆ ಏರಿಕೆಯಾಗಿದೆ. ಬುಧವಾರ ಇಬ್ಬರು ಗುಣಮುಖರಾಗಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 6808. ಇದೇ ವೇಳೆ ಒಟ್ಟು ಸೋಂಕಿತರ ಸಂಖ್ಯೆ 6966 ಕ್ಕೇರಿದೆ. ಜಿಲ್ಲೆಯಲ್ಲಿ ಒಟ್ಟು 132 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಬುಧವಾರ ಒಟ್ಟು 810 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇವರಲ್ಲಿ 800 ನೆಗೆಟಿವ್ ಫಲಿತಾಂಶ ಹೊಂದಿವೆ.
———
ಕೋವಿಡ್ ಅಂಕಿ ಅಂಶ
ಇಂದಿನ ಪ್ರಕರಣ: 10
ಇಂದು ಗುಣಮುಖ: 02
ಒಟ್ಟು ಗುಣಮುಖ: 6808
ಇಂದಿನ ಸಾವು: 00
ಒಟ್ಟು ಸಾವು: 132
ಸಕ್ರಿಯ ಪ್ರಕರಣಗಳು: 26
ಒಟ್ಟು ಸೋಂಕಿತರು: 6966