ಕೋವಿಡ್ 19 ಹೊಡೆತ ಇಲ್ಲದೇ ಇರುತ್ತಿದ್ದರೆ ಇಷ್ಟೊತ್ತಿಗೆ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಜೊತೆಗೆ ಒಂದಷ್ಟು ಹೊಸಬರ ಸಿನಿಮಾಗಳು ಮುಹೂರ್ತ ಕಾಣುತ್ತಿದ್ದವು. ಆದರೆ, ಕೊರೊನಾದಿಂದಾಗಿ ಎಲ್ಲವೂ ಮುಂದಕ್ಕೆ ಹೋಗಿದೆ. ಆದರೆ, ಈಗ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ನೀಡುವ ಮೂಲಕ ಸಿನಿಮಾ ಮಂದಿ ತಮ್ಮ ಕೆಲಸ ಆರಂಭಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರೋದು ಹೊಸಬರ ಸಿನಿಮಾ.
ಅದಕ್ಕೆ ಕಾರಣ ಸಿನಿಮಾ ಬಿಡುಗಡೆಯ ಧಾವಂತ. ಚಿತ್ರಬಿಡುಗಡೆಗೆ ಅನಿಮತಿ ಸಿಕ್ಕ ನಂತರ ಸಹಜವಾಗಿಯೇ ಬಿಡುಗಡೆಯ ಕ್ಯೂ ಹೆಚ್ಚಿರುತ್ತದೆ. ಸಿಕ್ಕ ಗ್ಯಾಪ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಆ ಕಾರಣದಿಂದ ಸಾಕಷ್ಟು ಸಿನಿಮಾಗಳು ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿವೆ. ಈ ಸಾಲಿನಲ್ಲಿ 9 ದಿನಗಳು ಹಾಗೂ ಅಲ್ಲೇ ಡ್ರಾ ಅಲ್ಲೇ ಬಹುಮಾನ ಸಿನಿಮಾಗಳು ಕೂಡಾ ಸಿಗುತ್ತವೆ. ಈ ಚಿತ್ರಗಳು ಕೂಡಾ ತಮ್ಮ ಕೆಲಸ ಮುಗಿಸಿ ಬಿಡುಗಡೆಗೆ ತಯಾರಾಗುತ್ತಿವೆ.
ಡಾ.ಎಂ.ವೆಂಕಟಸ್ವಾಮಿ, ಹರ್ಷ ವರುಣ್ ಪೈ, ಸಿ.ಎಂ. ಮುರುಗ ನಿರ್ಮಿಸುತ್ತಿರುವ 9 ದಿನಗಳು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ತೊಡಗಿದೆ. ಚಿತ್ರಕ್ಕೆ ಕಾರ್ತಿಕ್ ಜೆ. ಕಿರಣ್ ಛಾಯಾಗ್ರಹಣ, ಎಂ. ಸಂಜೀವ್ ರಾವ್ ಸಂಗೀತ, ಅಲ್ಟಿಮೇಟ್ ಶಿವು ಸಾಹಸ, ಹರಿಕೃಷ್ಣ ನತ್ಯ, ನಾಗರಾಜ್ ಕಲೆ, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಸ್.ಎಸ್. ವಿಧಾ ಅವರದು.
ಚಿತ್ರದ ತಾರಾಗಣದಲ್ಲಿ ದೆ„ವಿಕ್, ಮಾನಸ, ಅರ್ಜುನ್ ವೀರ್, ಎಂ. ವೆಂಕಟಸ್ವಾಮಿ, ಅರ್ಚನಾ, ಕಬಾಡ ಸಂತೋಷ್, ಗಿರೀಶ್, ಸಂದೀಪ್, ಸಂಜು, ಮೋಹನ್ ಮುಂತಾದವರಿದ್ದಾರೆ. ಇನ್ನು, ಹೊಸಬರ ಅಲ್ಲೇ ಡ್ರಾ ಅಲ್ಲೇ ಬಹುಮಾನ ಚಿತ್ರ ಕೂಡಾ ಭರದಿಂದ ತಯಾರಿ ನಡೆಸುತ್ತಿದೆ. ಪ್ರಶಾಂತ್ ಬಿ.ಜೆ. ನಿರ್ಮಿಸುತ್ತಿರುವ ಈ ಚಿತ್ರದ ಡಬ್ಬಿಂಗ್ ಕಾರ್ಯ ಮುಕ್ತಾಯಗೊಂಡಿತು. ಚಿತ್ರಕ್ಕೆ ರೀರಿಕಾರ್ಡಿಂಗ್ ಕಾರ್ಯವು ಸದ್ಯದಲ್ಲೇ ಆರಂಭವಾಗಲಿದ್ದು, ಚಿತ್ರವು ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಸತೀಶ್ ರಾಜೇಂದ್ರನ್ ಛಾಯಾಗ್ರಹಣ, ರಘುಶಾಸ್ತ್ರೀ ಸಾಹಿತ್ಯ, ವಿಜಯ್ ರಾಜ್ ಸಂಗೀತ, ಡಿಫರೆಂಟ್ ಡ್ಯಾನಿ ಸಾಹಸ, ಉಜ್ವಲ್ ಸಂಕಲನವಿದ್ದು, ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇ ಶನದ ಹೊಣೆಯನ್ನು ರತ್ನತೀರ್ಥ ಹೊತ್ತಿದ್ದು, ಈ ಚಿತ್ರದ ಮೂಲಕ ನಿರ್ದೇ ಶಕರಾಗಿ ಪರಿಚಯವಾಗುತ್ತಿದ್ದಾರೆ. ತಾರಾಗಣದಲ್ಲಿ ಶೌರ್ಯ, ತ್ರಿವೇಣಿಕೃಷ್ಣ, ಶಂಕರ್ ಅಶ್ವತ್ಥ್, ರಘು ರಮಣ ಕೊಪ್ಪ, ಕುರಿ ಬಾಂಡ್ ರಂಗಸ್ವಾಮಿ, ಧನು, ಸುಮಂತ್ ಪರಶುರಾಂ ಮುಂತಾದವರಿದ್ದಾರೆ.