Advertisement

ಇಂಪಾಲ್‌-ದಿಲ್ಲಿ ಏರ್‌ ಏಶ್ಯ ವಿಮಾನ: ನವಜಾತ ಶಿಶುವಿನ ಮೃತ ದೇಹ ಪತ್ತೆ

07:08 PM Jul 25, 2018 | udayavani editorial |

ಹೊಸದಿಲ್ಲಿ : ಏರ್‌ ಏಶ್ಯ ವಿಮಾನದಲ್ಲಿ ನವಜಾತ ಶಿಶುವಿನ ಮೃತ ದೇಹ ಪತ್ತೆಯಾಗಿರುವುದು ವರದಿಯಾಗಿದೆ. 

Advertisement

ದಿಲ್ಲಿಗೆ ಹೋಗಲಿದ್ದ ಏರ್‌ ಏಶ್ಯದ ಈ ವಿಮಾನ ಗುವಾಹಟಿ ಮಾರ್ಗವಾಗಿ ಇಂಫಾಲ್‌ನಿಂದ ಬರುತ್ತಿತ್ತು ಎಂದು ತಿಳಿದು ಬಂದಿದೆ. 

ದಿಲ್ಲಿ ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳು ಪ್ರಕರಣದ ಸಂಬಂಧ ತನಿಖೆ ಆರಂಭಿಸಿದ್ದಾರೆ. 

ನವಜಾತ ಶಿಶುವಿನ ಮೃತ ದೇಹ ಕಂಡು ಬಂದ ಇದೇ ವಿಮಾನದಲ್ಲಿ ಅದರ ಜೈವಿಕ ತಾಯಿ ಕೂಡ ಪ್ರಯಾಣಿಸುತ್ತಿದ್ದು ಆಕೆಯನ್ನು ಇನ್ನೂ ಗುರುತಿಸಲಾಗಿಲ್ಲ.

ಹೆಚ್ಚಿನ ವಿವರಗಳನ್ನು ಕಾಯಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next