Advertisement

ಆರೋಗ್ಯ ನಿರ್ವಹಣೆಯಲ್ಲಿ ನವಜಾತ ಶಿಶುವಿನ ಆರೈಕೆ

06:12 PM Dec 07, 2020 | mahesh |

ಬೆಂಗಳೂರು: ನಗರದ ಆಚಾರ್ಯ ಮಹಾವಿದ್ಯಾಲಯದ ನಾಗರತ್ನಮ್ಮ ಕಾಲೇಜ್‌ ಆಫ್ ನರ್ಸಿಂಗ್‌ ವತಿಯಿಂದ ನಡೆದ ವಿಚಾರ ಸಂಕಿರಣದಲ್ಲಿ ಕೋವಿಡ್‌ 19 ಸಮಯದಲ್ಲಿ ನವಜಾತ ಶಿಶುಗಳನ್ನು ಯಾವ ರೀತಿ ಮುನ್ನೆಚ್ಚರಿಕೆ, ಜಾಗೃತಿ ಜೊತೆಗೆ ಹೃದ್ರೋಗಿಗಳ ಆರೈಕೆ ನಿರ್ವಹಣೆಯಲ್ಲಿ ಹೊಸ ಕಾರ್ಯ ವಿಧಾನಗಳ ಕುರಿತು ವಿಚಾರ ಮಂಡಿಸಿದರು.

Advertisement

ನವಜಾತ ಮಕ್ಕಳ ಆರೈಕೆ ಮಾಡುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು, ಮುಖ್ಯವಾಗಿ ಆಕ್ಸಿಜನ್‌ ಕೊಡುವಾಗ ಮೂಗಿನ ಮೇಲೆ ಶಿಶುಗಳಿಗೆ ಗಾಯವಾದಾಗ‌ ಅದನ್ನು ತಡೆಗಟ್ಟುವುದರಿಂದ ನೇಸಲ್‌ ಸೆಪ್ಟಮ್‌ ಬಂಡಲ್‌ನ್ನು ಉಪಯೋಗಿಸುವುದರಿಂದ ಅಂತಹ ತೊಂದರೆಗಳನ್ನು ನಿವಾರಿಸಬಹುದು ಹಾಗೂ ಕಾಂಗರೂ ಮದರ್‌ ಕೇರ್‌ ಅಂದರೆ ಶಿಶುವನ್ನು ಬೆಚ್ಚಗೆ ಇಡುವುದರಿಂದ ಶಿಶುವಿನ ಬೆಳವಣಿಗೆಗೆ ಸಹಾಯವಾಗುತ್ತದೆ ಮತ್ತು ಎನ್‌ಐಸಿಯುನಲ್ಲಿ ಬೆಳಕು ಮತ್ತು ಶಬ್ಧದ ಪ್ರಮಾಣವನ್ನು ಡಬ್ಲ್ಯುಎಚ್‌ಒ ಶಿಫಾರಸ್ಸು ಇದರ ಬಗ್ಗೆ ಓಮನ್‌ ಕೌಲ ಆಸ್ಪತ್ರೆಯ ನರ್ಸಿಂಗ್‌ ಆಡಳಿತ ಮಂಡಲಿಯ ಶ್ರೀಮತಿ ಶೂರೊಕ್ಯೂ ಮೊಹಮ್ಮದ್‌ ತಿಳಿಸಿದರು.

ಜನನ ಹಾಗೂ ಮರಣ ಪ್ರಮಾಣ: ಆಚಾರ್ಯ ನಾಗರತ್ನಮ್ಮ ಸ್ಕೂಲ್‌ ಹಾಗೂ ಕಾಲೇಜ್‌ ಆಫ್ ನರ್ಸಿಂಗ್‌ನ ಶಿಶುವೈದ್ಯ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಶ್ರೀಮತಿ ಅಂಬಾ ಇವರು ನವಜಾತ ಶಿಶುಗಳ ಜನನ ಹಾಗೂ ಮರಣಗಳ ಪ್ರಮಾಣವನ್ನು ಭಾರತದಲ್ಲಿ 34 ಮಗುವಿನ ಜನನವಾದರೆ, ಪ್ರಪಂಚದಲ್ಲಿ ಪ್ರತಿ ನಿಮಿಷಕ್ಕೆ 250 ಮಗುವಿನ ಜನನವಾಗುತ್ತದೆ. ಹಾಗೆಯೇ ಒಂದು ಗಂಟೆಗೆ 2062 ಹಾಗೂ 67385 ಒಂದು ದಿನಕ್ಕೆ ಮಕ್ಕಳ ಜನನವಾಗುತ್ತದೆ. ಪ್ರತಿ ನಿಮಿಷದಲ್ಲಿ 10 ಮಕ್ಕಳ ಮರಣ, ಪ್ರತಿ ಗಂಟೆಯಲ್ಲಿ 603 ಮಕ್ಕಳ ಮರಣ, ಪ್ರತಿದಿನ 14475 ಮರಣವನ್ನು ನಾವು ಭಾರತದಲ್ಲಿ ಕಾಣಬಹುದು. ಈ ಮರಣ ಪ್ರಮಾಣವನ್ನು ಕಡಿಮೆಮಾಡಲು ಭಾರತ ಸರಕಾರವು ಪ್ರಧಾನಮಂತ್ರಿ ಸುರಕ್ಷಿತ್‌ ಮಾತೃತಾ ಅಭಿಯಾನ್‌, ಸಿಎಸ್‌ಎಸ್‌ಎಂ, ಆರ್‌ಸಿಎಚ್‌, ಎನ್‌ಆರ್‌ಎಚ್‌ಎಂ, ಐಎನ್‌ಎಪಿ, ಎಮ್‌ಎಎ ಇವರು ತೆಗೆದುಕೊಳ್ಳುವ ಕಾರ್ಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.

ಕಡಿಮೆ ತೂಕದ ಶಿಶುವಿಗೆ ಅದರ ಬೆಳವಣಿಗೆ, ವಯಸ್ಸಿನ ಪ್ರಕಾರ ಹಾಲು ಉಣಿಸುವುದರ ಬಗ್ಗೆ ಹಾಗೂ ಯಾವ ಯಾವ ತೊಂದರೆಗಳು ಬರುವ ವಿಚಾರ, ಅದನ್ನು ನಿವಾರಣೆ ಮಾಡಲು ತಾಯಿ ಹಾಲು ಶೇಖರಣೆ ಮತ್ತು ಎಷ್ಟು ಉಷ್ಣಾಂಶದಲ್ಲಿ ಶೇಖರಣೆಯನ್ನು ಮಾಡಬೇಕು, ಎಷ್ಟು ಗಂಟೆಗಳ ಕಾಲ ಶೇಖರಿಸಬಹುದು ಎಂದು ಓಮನ್‌ ಆಸ್ಪತ್ರೆಯ ಸಂಯೋಜಕಿ ಶ್ರೀಮತಿ ಜಮೀಮ ಮೊಹಮ್ಮದ್‌ ತಿಳಿಸಿದರು.

ನವಜಾತ ಶಿಶುಗಳಲ್ಲಿ ಪ್ರಪಂಚದಲ್ಲಿ ಒಂದು ಸಾವಿರ ಮಕ್ಕಳಲ್ಲಿ 5ರಿಂದ 8 ಮಕ್ಕಳಿಗೆ ಹೃದಯ ರೋಗ ಕಾಣಿಸಿಕೊಳ್ಳುವುದು. ಅದರಲ್ಲಿ 90% ಮಕ್ಕಳು ಬೆಳೆದು ದೊಡ್ಡವರಾಗುವುದು ಹಾಗೂ ವಿಶ್ವದಾದ್ಯಂತ 2017ರಲ್ಲಿ 2,61247 ಮಕ್ಕಳ ಸಾವು ಆಗಿದೆ. ಈ ಹೃದಯ ಸಂಬಂಧಿ ರೋಗಗಳಿಗೆ ಕಾರಣ ಹಾಗೂ ಆಸ್ಪ$ತೆಗಳಲ್ಲಿ ಯಾವ ರೀತಿ ಆರೈಕೆ ಮಾಡಬೇಕು ಎಂದು ಶ್ರೀಮತಿ ಡಾ. ವಾರ್ದಾ ಅಲ್‌ ಅರ್ಮಿ ತಿಳಿಸಿಕೊಟ್ಟರು.

Advertisement

ರಕ್ತಹೀನತೆ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಬಗ್ಗೆ: ಪ್ರತಿವರ್ಷ ಪ್ರಪಂಚದಲ್ಲಿ 3ಲಕ್ಷಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ರಕ್ತಹೀನತೆಯಿಂದ ನರಳುತ್ತಿದ್ದಾರೆ ಹಾಗೂ ಭಾರತ ದೇಶದಲ್ಲಿ 20 ಮಿಲಿಯನ್‌ ಮಕ್ಕಳು ಈ ಕಾಯಿಲೆಯಿಂದ ನರಳುತ್ತಿದ್ದಾರೆ. ಮುಖ್ಯವಾಗಿ ಕುಡಗೋಲು ಕೋಶ ಹಾಗೂ ಥಲಸ್ಸೇಮಿಯಾ ಇದರ ಗುಣಲಕ್ಷಣಗಳು, ಅದರಿಂದ ಉಂಟಾಗುವ ತೊಂದರೆ, ಆರೈಕೆ ಹಾಗೂ ಕೋವಿಡ್‌ ಪಿಡುಗಿನ ಸಮಯದಲ್ಲಿ ಶಿಶುಗಳಿಗೆ ಬಂದ ತೊಂದರೆಗಳ ಬಗ್ಗೆ ಶ್ರೀಮತಿ ಡಾ.ಲಕ್ಷ್ಮೀ ರಂಗನಾಥ್‌ ವಿವರಿಸಿದರು.

ಆಚಾರ್ಯ ಆಲೈವ್‌ ಪ್ಲಾಟ್‌ಫಾರಂನಲ್ಲಿ ಈ ಕಾರ್ಯಕ್ರಮವನ್ನು ಶ್ರೀಮತಿ ಮರ್ಸಿ ದೇವಪ್ರಿಯ ನಿರೂಪಿಸಿದರು. ಡಾ. ಟಿಎನ್‌ ಭೀಮರಾಜು ವಂದಿಸಿದರು. ಪ್ರಾಂಶುಪಾಲರಾದ ಶ್ರೀಮತಿ ದೇವಿ ನಂಜಪ್ಪನ್‌, ಕ್ಯಾಂಪಸ್‌ನ ಮುಖ್ಯಸ್ಥರಾದ ಡಾ. ಮನೀಷ್‌ ಪಾಲ್‌, ಎಚ್‌ಆರ್‌ ಮುಖ್ಯಸ್ಥರಾದ ಹರೀಶ್‌ ಕೆ.ಎಲ್‌, ಸಹ ಶಿಕ್ಷಕ, ಶಿಕ್ಷಕಿಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next