Advertisement

ಮಂಗಳೂರು : ಹುಟ್ಟುವಾಗಲೇ ನವಜಾತ ಶಿಶುವಿನಲ್ಲಿ ಹಲ್ಲು! ವೈದ್ಯರು ಹೇಳಿದ್ದೇನು ಗೊತ್ತೆ ?

01:38 AM Jul 07, 2022 | Team Udayavani |

ಮಂಗಳೂರು: ಮಗು ಹುಟ್ಟಿದಾಗಲೇ ಹಲ್ಲುಗಳು ಕಾಣಿಸಿಕೊಳ್ಳುವುದು ಅಪರೂಪ. ಆದರೆ ಮಂಜೇಶ್ವರ ಮೂಲದ ದಂಪತಿಯ ಮಗುವಿಗೆ ಹುಟ್ಟುವಾಗಲೇ ಎರಡು ಹಲ್ಲು ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.

Advertisement

ಮಂಜೇಶ್ವರದ ಮೀಯಪದವಿನ ರಾಜೇಶ್‌-ಧನ್ಯಾ ದಂಪತಿಗೆ ಜು. 4ರಂದು ಕುಂಬಳೆಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಆ ವೇಳೆಗಾಗಲೇ ಮಗುವಿನ ಬಾಯಲ್ಲಿ ಎರಡು ಹಲ್ಲು ಕಾಣಿಸಿಕೊಂಡಿದ್ದು, ಹೆಚ್ಚಿನ ಮಾಹಿತಿಗೆ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷ ದಂತ ಚಿಕಿತ್ಸಾಲಯದಲ್ಲಿ ಡಾ| ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿ ಸಂಪರ್ಕಿಸಿ ಸಮಾಲೋಚನೆ ನಡೆಸಿದರು.

ಡಾ| ಚೂಂತಾರು ಅವರು ಉದಯವಾಣಿಗೆ ಪ್ರತಿಕ್ರಿಯಿಸಿ, “ಹುಟ್ಟುವಾಗಲೇ ಮಗುವಿನಲ್ಲಿ ಹಲ್ಲು ಇರುವುದು ಅತಿವಿರಳ. ಒಂದು ವೇಳೆ ಇದ್ದರೂ ಮೃದುವಾಗಿರುವ ಅದು ತಾಯಿ ಹಾಲುಣಿಸುವ ಸಂದರ್ಭ ತುಂಡಾಗಿ ಗಂಟಲಿನಲ್ಲಿ ಸಿಕ್ಕಿ ಹಾಕುವ ಸಾಧ್ಯತೆ ಇರುವುದರಿಂದ ಶಸ್ತ್ರಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ ಈ ಶಿಶುವಿನ ಹಲ್ಲು ಗಟ್ಟಿ ಇದ್ದು, ಶಸ್ತ್ರಚಿಕಿತ್ಸೆಯ ಆವಶ್ಯಕತೆ ಇಲ್ಲ ಎಂದರು.

ಹುಟ್ಟುವಾಗಲೇ ಇರುವ ಹಲ್ಲುಗಳಿಗೆ ಜನ್ಮಜಾತ ಹಲ್ಲುಗಳು ಎನ್ನುತ್ತಾರೆ. “ನೇಟಲ್‌ಟೂತ್‌’ “ಭ್ರೂಣದ ಹಲ್ಲುಗಳು’ “ಹುಟ್ಟು ಹಲ್ಲುಗಳು’ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಜನಿಸಿದ ಒಂದು ತಿಂಗಳೊಳಗೆ ಬಾಯಲ್ಲಿ ಹಲ್ಲುಗಳು ಮೂಡುವ ಸಾಧ್ಯತೆ ಇರುತ್ತದೆ. ಈ ಹಲ್ಲುಗಳಿಗೆ “ನವಜಾತ ಶಿಶು ಹಲ್ಲುಗಳು’ “ನಿಯೋನೇಟಲ್‌ ಟೂತ್‌’ ಎಂದು ಕರೆಯುತ್ತಾರೆ’ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next