Advertisement

New Zealand ಮ್ಯಾಟ್‌ ಹೆನ್ರಿ ಗಾಯಾಳು; ಕೈಲ್‌ ಜೇಮಿಸನ್‌ಗೆ ಕರೆ

12:31 AM Nov 03, 2023 | Team Udayavani |

ಹೊಸದಿಲ್ಲಿ: ನ್ಯೂಜಿಲ್ಯಾಂಡ್‌ನ‌ ಸ್ಟ್ರೈಕ್‌ ಬೌಲರ್‌ ಮ್ಯಾಟ್‌ ಹೆನ್ರಿ ಗಾಯಾಳಾದ ಕಾರಣ ನೀಳಕಾಯದ ವೇಗಿ ಕೈಲ್‌ ಜೇಮಿಸನ್‌ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಶನಿವಾರ ಬೆಂಗಳೂರಿನಲ್ಲಿ ಕಿವೀಸ್‌ ತಂಡ ಪಾಕಿಸ್ಥಾನವನ್ನು ಎದುರಿಸಲಿದೆ.

Advertisement

ಬಲ ಭಾಗದ ಸ್ನಾಯು ಸೆಳೆತಕ್ಕೆ ಸಿಲುಕಿರುವ ಮ್ಯಾಟ್‌ ಹೆನ್ರಿ ಅವರ ಸ್ಕ್ಯಾನಿಂಗ್‌ ವರದಿಯನ್ನು ಕಾಯ ಲಾಗುತ್ತಿದೆ. ಮುಂದಿನೆರಡೂ ಪಂದ್ಯ ಗಳು ನ್ಯೂಜಿಲ್ಯಾಂಡ್‌ ಪಾಲಿಗೆ ನಿರ್ಣಾ ಯಕವಾಗಿರುವುದರಿಂದ ಮುನ್ನೆಚ್ಚ ರಿಕೆಯ ಕ್ರಮವಾಗಿ ಜೇಮಿಸನ್‌ ಅವರನ್ನು ಕರೆಸಲು ನಿರ್ಧರಿಸಿತು. ಟಿಮ್‌ ಸೌಥಿ ಗಾಯಾಳಾದಾಗಲೂ ಜೇಮಿಸನ್‌ ತಂಡದಲ್ಲಿದ್ದರು. 28 ವರ್ಷದ, 6 ಅಡಿ-8 ಇಂಚು ಎತ್ತರದ ಈ ವೇಗಿ ಬಳಿಕ ತವರಿಗೆ ವಾಪಸಾಗಿದ್ದರು.

“ವಿಶ್ವಕಪ್‌ಗ್ಳಲ್ಲಿ ಮ್ಯಾಟ್‌ ಹೆನ್ರಿ ನಮ್ಮ ವಿಶ್ವ ದರ್ಜೆಯ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಆದರೆ ಶನಿವಾರ ಪಾಕಿಸ್ಥಾನ ಎದುರಿನ ಪಂದ್ಯದಲ್ಲಿ ಇವರನ್ನು ಆಡಿಸುವ ರಿಸ್ಕ್ ತೆಗೆದು ಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮತ್ತೆ ಜೇಮಿಸನ್‌ ಅವರನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಯಿತು’ ಎಂದು ಕೋಚ್‌ ಗ್ಯಾರಿ ಸ್ಟೆಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next