Advertisement

ಈಗ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಪೊಲೀಸ್‌

09:53 AM Feb 16, 2020 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ಚೀನದಲ್ಲಿ ಕೃತಕ ಬುದ್ಧಿಮತ್ತೆಯ (ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌) ಸುದ್ದಿ ವಾಚಕರನ್ನು ನೋಡಿದ್ದೇವೆ. ಈಗ ನ್ಯೂಜಿಲೆಂಡ್‌ನ‌ಲ್ಲಿ ಕೃತಕ ಬುದ್ಧಿಮತ್ತೆ ಪೊಲೀಸ್‌ ಅನ್ನು ಕಾಣಬಹುದು. ಫೆ.17ರಿಂದ ಸೇವೆಗೆ ಇಳಿಯಲಿರುವ ಈ ಕೃತಕ ಪೊಲೀಸ್‌ಗೆ ಇಲಾ ಎಂದು ಹೆಸರಿಡಲಾಗಿದೆ.

Advertisement

ನ್ಯೂಜಿಲೆಂಡ್‌ನ‌ ರಾಜಧಾನಿ ವೆಲ್ಲಿಂಗ್ಟನ್‌ನ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಅದು ಕಾರ್ಯಾಚರಣೆ ನಡೆಸಲಿದೆ. ಸಂದರ್ಶಕರೊಂದಿಗೆ ಮುಖಾಮುಖೀ ಚರ್ಚೆ ನಡೆಸುವುದು, ಪೊಲೀಸ್‌ ಪರಿಶೀಲನೆ, ಮುಂತಾದ ಕೆಲಸಗಳನ್ನು ಅದು ನಿರ್ವಹಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next