Advertisement

ಭೂಕಂಪ: ದ್ವೀಪಗಳ ಮಿಲನ?

06:00 AM Nov 25, 2018 | Team Udayavani |

ವೆಲ್ಲಿಂಗ್ಟನ್‌: ಎರಡು ದ್ವೀಪಗಳ ರಾಷ್ಟ್ರವಾದ ನ್ಯೂಜಿಲೆಂಡ್‌ನ‌ಲ್ಲಿ ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ಭೂಕಂಪವು ಆ ದ್ವೀಪಗಳನ್ನು ಪರಸ್ಪರ ಹತ್ತಿರಕ್ಕೆ ಸರಿಯುವಂತೆ ಮಾಡಿದೆ. ಜತೆಗೆ, ಉತ್ತರ ದ್ವೀಪದ ಉತ್ತರ ಭಾಗದ ತುತ್ತ ತುದಿಯಲ್ಲಿರುವ ನೆಲ್ಸನ್‌ ನಗರ ನಿಧಾನವಾಗಿ ಸಾಗರದಲ್ಲಿ ಮುಳುಗಲಾರಂಭಿಸಿದೆ ಎಂದು ನ್ಯೂಜಿಲೆಂಡ್‌ ಭೂಗರ್ಭ ವಿಜ್ಞಾನಿಗಳು ತಿಳಿಸಿದ್ದಾರೆ. 

Advertisement

2016ರ ನ. 14ರಂದು ಉತ್ತರ ಮತ್ತು ದಕ್ಷಿಣ ದ್ವೀಪಗಳ ನಡುವೆ ರಿಕ್ಟರ್‌ ಮಾಪಕದಲ್ಲಿ 7.8ರಷ್ಟು ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಿಂದಾಗಿ, ಎರಡೂ ದ್ವೀಪಗಳ ಸಮಾನಾಂತರ ರೇಖೆಗಳಲ್ಲಿ ಕನಿಷ್ಠ 25 ರೇಖೆಗಳು ಏರುಪೇರಾಗಿದ್ದು, ಇವುಗಳ ಅಯಸ್ಕಾಂತೀಯ ಶಕ್ತಿ ದಕ್ಷಿಣ ದ್ವೀಪವನ್ನು ಉತ್ತರ ದ್ವೀಪದ ಕಡೆಗೆ ದಬ್ಬುತ್ತಿದೆ ಎನ್ನಲಾಗಿದೆ. ಅಂದಹಾಗೆ, ಈ ದ್ವೀಪಗಳ ಸೇರುವಿಕೆ ಸದ್ಯದಲ್ಲೇ ನಡೆಯುವ ವಿದ್ಯಮಾನವೇನಲ್ಲ. ಇದಕ್ಕೆ ಹಲವು ವರ್ಷಗಳೇ ಬೇಕಾಗಬಹುದು. ಕಳೆದೆರಡು ವರ್ಷಗಳಲ್ಲಿ ಉತ್ತರ ಮತ್ತು ದಕ್ಷಿಣ ದ್ವೀಪಗಳು ಕೇವಲ 35 ಸೆಂ.ಮೀ. ಮಾತ್ರ ಸರಿದಿದ್ದು, ಇವುಗಳ ನಡುವಿನ ಅಂತರ ಇನ್ನೂ 50 ಕಿ.ಮೀ. ಇದೆಯಾದ್ದರಿಂದ ಇವುಗಳ ಮಿಲನ ಸದ್ಯಕ್ಕೆ ನಡೆಯುವುದಿಲ್ಲ. ಹಾಗೆಯೇ, ನೆಲ್ಸನ್‌ ನಗರವೂ ಕಳೆದ ಎರಡು ವರ್ಷಗಳಲ್ಲಿ 20 ಮಿ.ಮೀ.ನಷ್ಟು ಮಾತ್ರ ಮುಳುಗಡೆಯಾಗಿದ್ದು, ಇದೂ ಸಹ ಬೇಗನೇ ಮುಳುಗುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next