Advertisement

ಪಾಕ್ ವಿರುದ್ಧದ ಟಿ20 ಸರಣಿ ವಶಪಡಿಸಿಕೊಂಡ ನ್ಯೂಜಿಲ್ಯಾಂಡ್‌

08:28 AM Dec 21, 2020 | keerthan |

ಆಕ್ಲೆಂಡ್‌: ರವಿವಾರ ನಡೆದ ಪ್ರವಾಸಿ ಪಾಕಿಸ್ಥಾನ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 9 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 3 ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಉಳಿದಿರುವಂತೆ 2-0 ಅಂತರದ ಮುನ್ನಡೆ ಸಾಧಿಸಿದ ಕಿವೀಸ್‌ ಸರಣಿಯನ್ನು ವಶಪಡಿಸಿಕೊಂಡಿದೆ.

Advertisement

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಮಧ್ಯಮ ಕ್ರಮಾಂದಲ್ಲಿ ಸ್ಟೋಟಕ ಬ್ಯಾಟಿಂಗ್‌ ನಡೆಸಿದ ಹಫೀಜ್‌ ನೆರವಿನಿಂದ ಸೀಮಿತ 20 ಓವರ್‌ಗಳಲ್ಲಿ 6 ವಿಕೆಟಿಗೆ 163 ಪೇರಿಸಿತು. ಗುರಿ ಬೆನ್ನತ್ತಿದ ಕಿವೀಸ್‌ 19.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 164 ರನ್‌ ಬಾರಿಸಿ ಗೆದ್ದು ಬಂದಿತು.

ಕಳೆದ ಪಂದ್ಯದಲ್ಲಿ ಅರ್ಧಶಕ ಸಿಡಿಸಿ ಮಿಂಚಿದ್ದ ಟೀಮ್‌ ಸೀಫ‌ರ್ಟ್‌ ಈ ಪಂದ್ಯದಲ್ಲಿಯೂ 63 ಎಸೆಗಳಿಂದ ಅಜೇಯ 84 ರನ್‌ ಬಾರಿಸಿದರು. ಈ

ಅಮೋಘ ಇನ್ನಿಂಗ್ಸ್‌ ನಲ್ಲಿ 8 ಬೌಂಡರಿ, 3 ಸಿಕ್ಸರ್‌ ಒಳಗೊಂಡಿತ್ತು. ಉಳಿದಂತೆ ಕೇನ್‌ ವಿಲಿಯಮ್ಸನ್‌ ಕೂಡ ನಾಯನ ಆಟವಾಡಿ ಅಜೇಯ 57 ರನ್‌ ಪೇರಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸುವ ಇರಾದೆಯೊಂದಿಗೆ ಆಡಲಿಳಿದ ಪಾಕಿಸ್ಥಾನಕ್ಕೆ ಉತ್ತಮ ಆರಂಭ ಸಿಗಲಿಲ್ಲ. 15 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಆಘಾತ ಎದುರಿಸಿತ್ತು. ಹೈದರ್‌ ಅಲಿ (8), ಶμಕ್‌ (0) ರನ್‌ ಗಳಿಸಲಷ್ಟೆ ಶಕ್ತರಾದರು. ಘಾತಕ ಸ್ಪೆಲ್‌ ನಡೆಸಿದ ಟೀಮ್‌ ಸೌಥಿ ಈ ಎರಡು ವಿಕೆಟ್‌ ಕಬಳಿಸಿದರು.

Advertisement

ಹಫೀಜ್‌ ಏಕಾಂಗಿ ಹೊರಾಟ: ಒಂದು ಬದಿ ಪಾಕ್‌ ವಿಕೆಟ್‌ ಬೀಳುತ್ತಿದ್ದರು ಮತ್ತೂಂದು ಬದಿಯಲ್ಲಿ ಏಕಾಂಗಿಯಾಗಿ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದ ಹಫೀಜ್‌ ಎದುರಾಳಿ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿ 57 ಎಸೆತಗಳಿಂದ ಅಜೇಯ 99 ರನ್‌ ಸಿಡಿಸಿ ಕೇವಲ ಒಂದು ರನ್‌ ಅಂತರದಿಂದ ಶತಕ ಬಾರಿಸುವ ಅವಕಾಶವೊಂದನ್ನು ತಪ್ಪಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್‌

ಪಾಕಿಸ್ಥಾನ: 20 ಓವರ್‌ಗಳಲ್ಲಿ 6 ವಿಕೆಟಿಗೆ 163 (ಹಫೀಜ್ ಅಜೇಯ 99, ರಿಝ್ವಾನ್‌ 22, ಟೀಮ್‌ ಸೌಥಿ 21ಕ್ಕೆ4, ನೀಶಮ್‌ 10ಕ್ಕೆ 1).

ನ್ಯೂಜಿಲ್ಯಾಂಡ್‌: 19.2 ಓವರ್‌ಗಳಲ್ಲಿ ಒಂದು ವಿಕೆಟಿಗೆ 164 (ಸೀಫ‌ರ್ಟ್‌ ಅಜೇಯ 84, ವಿಲಿಯಮ್ಸನ್‌ ಅಜೇಯ 57, ಅಶ್ರಫ್ 19ಕ್ಕೆ 1).

ಪಂದ್ಯಶ್ರೇಷ್ಠ: ಟೀಮ್‌ ಸೌಥಿ

Advertisement

Udayavani is now on Telegram. Click here to join our channel and stay updated with the latest news.

Next