Advertisement

ನೈಲ್‌ ವಾಗ್ನರ್‌ ಮಿಂಚಿನ ಬೌಲಿಂಗ್‌, ಕಿವೀಸ್‌ಗೆ ಸರಣಿ

12:30 AM Mar 13, 2019 | Team Udayavani |

ವೆಲ್ಲಿಂಗ್ಟನ್‌: ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ಇನ್ನಿಂಗ್ಸ್‌ ಮತ್ತು  12 ರನ್‌ಗಳ ಗೆಲುವು ಸಾಧಿಸಿ 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.

Advertisement

ಬಾಂಗ್ಲಾದೇಶದ 211 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲ್ಯಾಂಡ್‌ 6 ವಿಕೆಟಿಗೆ 432 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತ್ತು. ರಾಸ್‌ ಟಯ್ಲರ್‌ 200, ಹೆನ್ರಿ ನಿಕೋಲಾಸ್‌ 107 ರನ್‌ ಬಾರಿಸಿ ಮಿಂಚಿದ್ದರು. ಪಂದ್ಯದ ಅಂತಿಮ ದಿನವಾದ ಮಂಗಳವಾರ ಬಾಂಗ್ಲಾ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 3 ವಿಕೆಟಿಗೆ 80 ರನ್‌ಗಳಿಂದ ಆಟ ಆರಂಭಿಸಿತ್ತು. ಆದರೆ  ಕಿವೀಸ್‌ ಬೌಲಿಂಗ್‌ ದಾಳಿಗೆ ತತ್ತರಿಸಿ 209 ರನ್‌ಗಳಿಗೆ ಆಲೌಟಾಗುವ ಮೂಲಕ ಇನ್ನಿಂಗ್ಸ್‌ ಮತ್ತು 12 ರನ್‌ಗಳ ಹೀನಾಯ ಸೋಲು ಕಂಡಿತು. 

ನೈಲ್‌ ವಾಗ್ನರ್‌ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳನ್ನು ಕಾಡುವಲ್ಲಿ ಯಶಸ್ವಿಯಾದರು. ಅವರು 5 ವಿಕೆಟ್‌ ಕಿತ್ತು ತಂಡದ ಗೆಲುವಿನ ರೂವಾರಿಯಾದರು. ಉಳಿದಂತೆ ಟ್ರೆಂಟ್‌ ಬೌಲ್ಟ್  52ಕ್ಕೆ 4 ವಿಕೆಟ್‌ ಕಬಳಿಸಿ ಮೆರೆದರು. ಬಾಂಗ್ಲಾ ಪರ ನಾಯಕ ಮೊಹಮ್ಮದುಲ್ಲ 67, ಮೊಹಮ್ಮದ್‌ ಮಿಥುನ್‌ 47 ರನ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-211 ಮತ್ತು 209 (ಮೊಹಮ್ಮದುಲ್ಲ 67, ಮೊಹಮ್ಮದ್‌ ಮಿಥುನ್‌ 47, ನೈಲ್‌ ವಾಗ್ನರ್‌ 45ಕ್ಕೆ 5, ಟ್ರೆಂಟ್‌ ಬೌಲ್ಟ್  52ಕ್ಕೆ 4), ನ್ಯೂಜಿಲ್ಯಾಂಡ್‌-432ಕ್ಕೆ 6 ಡಿಕ್ಲೇರ್‌ (ರಾಸ್‌ ಟೇಲರ್‌ 200, ಹೆನ್ರಿ ನಿಕೋಲಾಸ್‌ 107, ಕೇನ್‌ ವಿಲಿಯಮ್ಸನ್‌ 74, ಅಬು ಜಯಿದ್‌ 94ಕ್ಕೆ 3, ತೈಜುಲ್‌ ಇಸ್ಲಾಮ್‌ 99ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next