Advertisement

ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂಡಾ ಗರ್ಭಿಣಿ

10:51 AM Jan 20, 2018 | Sharanya Alva |

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂಡಾ ಆರ್ಡೆರ್ನ್ (37) ಗರ್ಭಿಣಿಯಾಗಿದ್ದಾರೆ. ಇದೇನು ವಿಶೇಷ ಎಂದು ಪ್ರಶ್ನೆ ಮಾಡಬೇಡಿ. ಪ್ರಧಾನಿ ಹುದ್ದೆಯಲ್ಲಿದ್ದಾಗಲೇ ಮಗುವನ್ನು ಹೆರಲಿರುವ ನ್ಯೂಜಿಲೆಂಡ್‌ನ‌ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಅಂದ ಹಾಗೆ ಇಂಥ ಖ್ಯಾತಿಗೆ ಪಾತ್ರರಾಗುವ ಜಗತ್ತಿನ ಮೊದಲ ಪ್ರಧಾನಿ ಇವರಲ್ಲ.

Advertisement

ಪಾಕಿಸ್ತಾನದ ಮಾಜಿ ಪ್ರಧಾನಿ ದಿ. ಬೆನಜೀರ್‌ ಭುಟ್ಟೋ 1990ರ ಜನವರಿಯಲ್ಲಿ ಪ್ರಧಾನಿ ಹುದ್ದೆಯಲ್ಲಿದ್ದಾಗ ಎರಡನೇ ಮಗಳಿಗೆ ಜನ್ಮ ನೀಡಿದ್ದರು. ಹೀಗಾಗಿ, ವಿಶ್ವದಲ್ಲಿ ಮೊದಲ ಬಾರಿಗೆ ಹುದ್ದೆಯಲ್ಲಿದ್ದಾಗ ಮಗು ಹೆತ್ತ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆ ಭುಟ್ಟೋಗೆ ಸಲ್ಲುತ್ತದೆ.

ಕಳೆದ ಅಕ್ಟೋಬರ್‌ನಲ್ಲಿ ಪ್ರಧಾನಮಂತ್ರಿಯಾಗಿ ಆರ್ಡೆರ್ನ್ ಅಧಿಕಾರ ಸ್ವೀಕರಿಸಿದ್ದರು. ಶುಕ್ರವಾರ ಟ್ವಿಟರ್‌ ಮೂಲಕ ಗರ್ಭಿಣಿ ಎಂದು ವಿಶ್ವಕ್ಕೆ ಸಾರಿದ್ದಾರೆ. “2017 ನಮಗೆ ಮಹತ್ವದ ವರ್ಷವಾಗಿದೆ ಎಂದು ತಿಳಿದುಕೊಂಡಿದ್ದೆವು. ಈ ವರ್ಷ ಈಗಾಗಲೇ ಹೆತ್ತವರಾಗಿರುವವರ ಸಾಲಿಗೆ ಸೇರಲಿದ್ದೇವೆ. ಪ್ರಧಾನಿ ಜತೆಗೆ ಅಮ್ಮನೂ ಆಗಲಿದ್ದೇನೆ. ಕ್ಲಾರ್ಕ್‌ (ಪತಿ ಕ್ಲಾರ್ಕ್‌ ಗೇಫೋರ್ಡ್‌) ತಂದೆಯಾಗಲಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಮಗು ಹೆತ್ತ ಬಳಿಕ ಆರು ವಾರಗಳ ಕಾಲ ಜೆಸಿಂಡಾ ರಜೆಯಲ್ಲಿ ತೆರಳಲಿದ್ದಾರಂತೆ.

Advertisement

Udayavani is now on Telegram. Click here to join our channel and stay updated with the latest news.

Next