Advertisement
ಇತ್ತೀಚೆಗಷ್ಟೇ ಯುಎಸ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದ 4ನೇ ಶ್ರೇಯಾಂಕದ ಪ್ರಣಯ್ ಇಂಡೋನೇಶ್ಯದ ಶೆಸರ್ ಹಿರೆನ್ ರುಸ್ಟಾವಿಟೊ ಅವರನ್ನು 21-14, 21-16 ಅಂತರದಿಂದ ಸೋಲಿಸಿದರು. ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್, 15ನೇ ಶ್ರೇಯಾಂಕಿತ ಕಶ್ಯಪ್ ಕೂಡ ಇಂಡೋನೇಶ್ಯ ಆಟಗಾರನನ್ನೇ ಮಣಿಸಿ ಮುನ್ನಡೆದರು. ಕಶ್ಯಪ್‌ಗೆ ಶರಣಾದವರು ದಿಯೊನಿಸಿಯುಸ್ ಹಯೋಮ್ ರುಂಬಾಕ. ಗೆಲುವಿನ ಅಂತರ 21-5, 21-10.
Related Articles
Advertisement
ಅಜಯ್ ಜಯರಾಮ್ ಪರಾಜಯಅಜಯ್ ಜಯರಾಮ್ ಚೈನೀಸ್ ತೈಪೆಯ ಚಿಯ ಹುಂಗ್ ಲು ವಿರುದ್ಧ 19-21, 13-21 ಅಂತರದಿಂದ ಸೋಲನುಭವಿಸಬೇಕಾಯಿತು. ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಉಳಿದ ಸ್ಪರ್ಧಿಗಳಾದ ಸಿದ್ಧಾರ್ಥ ಠಾಕೂರ್, ಸಚಿನ್ ರಾವಲ್, ಅರುಣ್ ಕುಮಾರ್, ಅಶೋಕ್ ಕುಮಾರ್ ಕೂಡ ಪರಾಭವಗೊಂಡಿದ್ದಾರೆ. ವನಿತಾ ಸಿಂಗಲ್ಸ್ ಅರ್ಹತಾ ಸುತ್ತಿನ ದ್ವಿತೀಯ ಸುತ್ತಿನಲ್ಲಿ ಸಂಯೋಗಿತಾ ಘೋರ್ಪಡೆ ನ್ಯೂಜಿಲ್ಯಾಂಡಿನ ಕ್ಸಿ ಯೋಂಗಿÏ ವಿರುದ್ಧ 3 ಗೇಮ್‌ಗಳ ಕಾದಾಟದ ಬಳಿಕ ಶರಣಾದರು. ಸಂಯೋಗಿತಾ ಮೊದಲ ಸುತ್ತಿನಲ್ಲಿ ನ್ಯೂಜಿಲ್ಯಾಂಡಿನ ಜವಾಯಾ ವೆಕಿ ವಿರುದ್ಧ ಜಯ ಸಾಧಿಸಿದ್ದರು.