Advertisement

ಟೆಸ್ಟ್ ರಾಂಕಿಂಗ್: ಭಾರತವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ನ್ಯೂಜಿಲ್ಯಾಂಡ್

12:55 PM Jun 14, 2021 | Team Udayavani |

ದುಬೈ: ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಸರಣಿಯ ಬಳಿಕ ಇದೀಗ ಐಸಿಸಿ ಟೆಸ್ಟ್ ರಾಂಕಿಂಗ್ ಬಿಡುಗಡೆ ಮಾಡಿದ್ದು, ಕೇನ್ ವಿಲಿಯಮ್ಸನ್ ಬಳಗ ಅಗ್ರ ಸ್ಥಾನಕ್ಕೇರಿದೆ.

Advertisement

ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ಗೆದ್ದ ಕಿವೀಸ್ 123 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ. 121 ಅಂಕ ಹೊಂದಿರುವ ಭಾರತ ತಂಡ ಎರಡನೇ ಸ್ಥಾನದಲ್ಲಿದೆ. ಈ ಸರಣಿಗೂ ಮೊದಲು ಭಾರತ ಮತ್ತು ಕಿವೀಸ್ ಎರಡೂ ತಂಡಗಳು 121 ಅಂಕ ಹೊಂದಿದ್ದವು.

ಇದನ್ನೂ ಓದಿ:ದ್ರಾವಿಡ್ ಜತೆ ಲಂಕಾ ಪ್ರವಾಸಕ್ಕೆ ಕೋಚ್ ಗಳಾಗಿ ದಿಲೀಪ್‌ ಮತ್ತು ಪಾರಸ್‌ ಮಾಂಬ್ರೆ ಆಯ್ಕೆ

ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ ನಾಲ್ಕನೇ ಸ್ಥಾನದಲ್ಲಿದೆ. ಈ ತಂಡಗಳು ಕ್ರಮವಾಗಿ 108 ಮತ್ತು 107 ಅಂಕ ಹೊಂದಿದೆ.

94 ಅಂಕಗಳೊಂದಿಗೆ ಪಾಕಿಸ್ಥಾನ ಐದನೇ ಸ್ಥಾನದಲ್ಲಿದ್ದರೆ, 84 ಅಂಕ ಹೊಂದಿರುವ ವೆಸ್ಟ್ ಇಂಡೀಸ್ ಆರನೇ ಸ್ಥಾನ ಪಡೆದಿದೆ. ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ 7 ಮತ್ತು 8ನೇ ಸ್ಥಾನದಲ್ಲಿದ್ದು, ಬಾಂಗ್ಲಾ ಮತ್ತು ಜಿಂಬಾಬ್ವೆ ಕೊನೆಯ ಎರಡು ಸ್ಥಾನದಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next