Advertisement

ಅಬ್ಬಾ..ಹೆರಿಗೆಗಾಗಿ ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿದ ಸಚಿವೆ !

11:53 AM Aug 21, 2018 | |

ವೆಲ್ಲಿಂಗ್ಟನ್‌ : ತುಂಬು ಗರ್ಭಿಣಿ ನಡೆಯುವಾಗಲು ತುಂಬಾ ಜಾಗರೂಕತೆ ಮಾಡಬೇಕು.ಆದರೆ ನ್ಯೂಜಿಲ್ಯಾಂಡ್‌ನ‌ ಸಚಿವೆ ಜ್ಯೂಲಿ ಅನ್ನೆ ಜಂಟರ್‌ ಅವರು ತನ್ನ ಚೊಚ್ಚಲ ಹೆರಿಗೆಗಾಗಿ ಸೈಕಲ್‌ನಲ್ಲಿ ತೆರಳಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

Advertisement

38 ರ ಹರೆಯದ ಜ್ಯೂಲಿ ಅವರು ತಾನು ಪತಿಯೊಂದಿಗೆ ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳುತ್ತಿರುವ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದು ಅದೀಗ ವಿಶ್ವಾದ್ಯಂತ ವೈರಲ್‌ ಆಗಿದೆ ಇಂಟರ್‌ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಪೋಸ್ಟ್‌ನಲ್ಲಿ ಕಾರಿನಲ್ಲಿ ತೆರಳಲು ಬೆಂಗಾವಲು ಸಿಬಂದಿಗೆ ಸಾಕಷ್ಟು ಜಾಗವಿರಲ್ಲಿಲ್ಲ ಎಂದು ಬರೆಯುವ ಮೂಲಕ ಸರಳತೆಯನ್ನು ತೋರಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 

ಸೈಕ್ಲಿಂಗ್‌ ಹೆರಿಗೆಗೆ ಮುನ್ನ ನನಗೆ ಉತ್ತಮ ಮನಸ್ಥಿತಿ ತಂದು ಕೊಡಲು ಕಾರಣವಾಗಿದೆ ಎಂದು ಜ್ಯೂಲಿ ಹೇಳಿಕೊಂಡಿದ್ದಾರೆ. 

ಜ್ಯೂಲಿ ಅವರು ಅಧಿಕಾರದಲ್ಲಿರುವಾಗಲೇ ತಾಯಿಯಾದ ನ್ಯೂಜಿಲ್ಯಾಂಡ್‌ ಸರ್ಕಾರದ 2 ನೇ ಪ್ರತಿನಿಧಿ ಎನಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ ಪ್ರಧಾನಿ ಜೆಸಿಂಡಾ ಅವರು ಈ ಹಿಂದೆ ಅಧಿಕಾರದಲ್ಲಿರುವಾಗಲೇ ತಾಯಿಯಾಗಿದ್ದರು. 

Advertisement

ಪಾಕ್‌ ಪ್ರಧಾನಿಯಾಗಿದ್ದ ದಿವಂಗತ ಬೆನಝಿರ್‌ ಬುಟ್ಟೋ ಅವರು ಅಧಿಕಾರದಲ್ಲಿರುವಾಗಲೆ ಮಗುವಿಗೆ ಜನ್ಮ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.