Advertisement

ರೋಚಕ ಡ್ರಾ; ನ್ಯೂಜಿಲ್ಯಾಂಡಿಗೆ ಸರಣಿ

07:00 AM Apr 04, 2018 | |

ಕ್ರೈಸ್ಟ್‌ಚರ್ಚ್‌: ನ್ಯೂಜಿಲ್ಯಾಂಡ್‌ ತಂಡದೆದುರು ನಡೆದ ದ್ವಿತೀಯ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದೆ. ರೋಚಕ ಡ್ರಾ ಸಾಧಿಸಿದ ನ್ಯೂಜಿಲ್ಯಾಂಡ್‌ ತಂಡವು ಎರಡು ಪಂದ್ಯಗಳ ಸರಣಿಯನ್ನು 1-0 ಅಂತರದಿಂದ ತನ್ನದಾಗಿಸಿಕೊಂಡಿದೆ.

Advertisement

ದ್ವಿತೀಯ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಇಂಗ್ಲೆಂಡ್‌ ತಂಡವು 9 ವಿಕೆಟಿಗೆ 352 ರನ್‌ ಪೇರಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತಲ್ಲದೇ ನ್ಯೂಜಿಲ್ಯಾಂಡ್‌ ಗೆಲುವಿಗೆ 382 ರನ್‌ ಗಳಿಸುವ ಗುರಿ ನೀಡಿತು. ವಿಕೆಟ್‌ ನಷ್ಟವಿಲ್ಲದೇ 42 ರನ್ನಿನಿಂದ ಅಂತಿಮ ದಿನದಾಟ ಆರಂಭಿಸಿದ ನ್ಯೂಜಿಲ್ಯಾಂಡ್‌ ಅದೇ ಮೊತ್ತಕ್ಕೆ ಎರಡು ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಒಳಗಾಯಿತು. ಆದರೆ ಟಾಮ್‌ ಲಾಥಂ ಏಕಾಂಗಿಯಾಗಿ ಹೋರಾಡಿ ಸೋಲು ತಪ್ಪಿಸಲು ಪ್ರಯತ್ನಿಸಿದರು. 

ನ್ಯೂಜಿಲ್ಯಾಂಡ್‌ 162 ರನ್‌ ತಲುಪಿಸಿದ ವೇಳೆ ಲಾಥಂ ಆರನೆಯವರಾಗಿ ಔಟ್‌ ಆದಾಗ ಇಂಗ್ಲೆಂಡಿಗೆ ಗೆಲ್ಲುವ ಅವಕಾಶವಿತ್ತು. ಆದರೆ ಗ್ರ್ಯಾಂಡ್‌ಹೋಮ್‌ ಮತ್ತು ಐಶ್‌ ಸೋಧಿ ಮ್ಯಾರಥಾನ್‌ ಇನ್ನಿಂಗ್ಸ್‌ ಆಡಿದ್ದರಿಂದ ನ್ಯೂಜಿಲ್ಯಾಂಡ್‌ ಸೋಲಿನಿಂದ ಪಾರಾಯಿತು. ಅವರಿಬ್ಬರು ಸುಮಾರು 24 ಓವರ್‌ ಆಡಿ ಇಂಗ್ಲೆಂಡಿಗೆ ಗೆಲುವು ನಿರಾಕರಿಸಿದರು. 57 ರನ್ನುಗಳ ಜತೆಯಾಟ ನಡೆಸಿದ ಅವರಿಬ್ಬರು ವೈಯಕ್ತಿಕವಾಗಿ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಪಂದ್ಯವನ್ನು ಡ್ರಾಗೊಳಿಸಲು ನಿರ್ಧರಿಸಿದಾಗ ನ್ಯೂಜಿಲ್ಯಾಂಡ್‌ 8 ವಿಕೆಟಿಗೆ 256 ರನ್‌ ಗಳಿಸಿತ್ತು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌ 307 ಮತ್ತು 9 ವಿಕೆಟಿಗೆ 352 ಡಿಕ್ಲೇರ್‌; ನ್ಯೂಜಿಲ್ಯಾಂಡ್‌ 278 ಮತ್ತು 8 ವಿಕೆಟಿಗೆ 256

Advertisement

Udayavani is now on Telegram. Click here to join our channel and stay updated with the latest news.

Next