ನವದೆಹಲಿ: ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಾವಳಿ ಅಕಸ್ಮಾತ್ ಸೆಪ್ಟೆಂಬರ್ ತಿಂಗಳಲ್ಲಿ ನಡೆದದ್ದೇ ಆದರೆ ಕೇನ್ ವಿಲಿಯಮ್ಸನ್ ಸಹಿತ ನ್ಯೂಜಿಲೆಂಡಿನ ಯಾವುದೇ ಆಟಗಾರರಿಗೆ ಭಾಗವಹಿಸಲು ಸಾಧ್ಯವಾಗದು ಎಂದು ತಿಳಿದು ಬಂದಿದೆ.
ಅಲ್ಲಿಗೆ ಇಂಗ್ಲೆಂಡ್ ನಂತರ ಎರಡನೇ ದೇಶ ಐಪಿಎಲ್ ಮುಂದುವರಿದ ಭಾಗದಲ್ಲಿ ಆಡಲು ಸಾಧ್ಯವಾಗುವುದಿಲ್ಲ ಎಂಬ ಸುಳಿವು ನೀಡಿದೆ. ಸೆಪ್ಟೆಂಬರ್ ವೇಳೆ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ಯುಎಇಯಲ್ಲಿ ಕ್ರಿಕೆಟ್ ಸರಣಿ ನಡೆಯಲಿದೆ.
ಹೀಗಾಗಿ ಇದನ್ನು ಬಿಟ್ಟು ಐಪಿಎಲ್ ಲೀಗ್‌ನಲ್ಲಿ ಆಡಲು ಕಿವೀಸ್ ಕ್ರಿಕೆಟಿಗರು ಮುಂದಾಗುವುದಿಲ್ಲ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ಮೂಲವೊಂದು ತಿಳಿಸಿದೆ. ಇವರಲ್ಲಿ ಕೇನ್ ವಿಲಿಯಮ್ಸನ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನೂತನ ನಾಯಕರಾಗಿದ್ದಾರೆ.
ಇದನ್ನೂ ಓದಿ:ಡಿ.9ರಿಂದ ಆರಂಭವಾಗಲಿದೆ ಆ್ಯಷಸ್ ಕ್ರಿಕೆಟ್ ಸರಣಿ
ಐಪಿಎಲ್‌ನಲ್ಲಿ ಆಡುತ್ತಿರುವ ನ್ಯೂಜಿಲೆಂಡಿನ ಉಳಿದ ಪ್ರಮುಖ ಕ್ರಿಕೆಟಿಗರೆಂದರೆ ಕೈಲ್ ಜೇಮಿಸನ್, ಜಿಮ್ಮಿ ನೀಶಮ್, ಲಾಕೀ ಫರ್ಗ್ಯುಸನ್, ಫಿನ್ ಅಲೆನ್, ಮಿಚೆಲ್ ಸ್ಯಾಂಟ್ನರ್, ಆ್ಯಡಂ ಮಿಲ್ನೆ ಮತ್ತು ಟಿಮ್ ಸೀಫರ್ಟ್