Advertisement
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ಇಂಡೀಸ್ ತಂಡವು ಡಗ್ ಬ್ರೇಸ್‌ವೆಲ್ ದಾಳಿಗೆ ಕುಸಿಯಿತು. ಆದರೂ ಎವಿನ್ ಲೂವಿಸ್, ರೋಮನ್ ಪೊವೆಲ್ ಅವರ ಅರ್ಧಶತಕದಿಂದಾಗಿ 9 ವಿಕೆಟಿಗೆ 248 ರನ್ನುಗಳ ಸಾಧಾರಣ ಮೊತ್ತ ಪೇರಿಸಿತು. ಇದಕ್ಕೆ ಉತ್ತರವಾಗಿ ಅಗ್ರ ಕ್ರಮಾಂಕದ ಆಟಗಾರರ ಜವಾಬ್ದಾರಿಯ ಆಟದಿಂದಾಗಿ ನ್ಯೂಜಿಲ್ಯಾಂಡ್ ಐದು ವಿಕೆಟ್ ನಷ್ಟದಲ್ಲಿ ಇನ್ನೂ 24 ಎಸೆತ ಬಾಕಿ ಉಳಿದಿರುವಂತೆ 249 ರನ್ ಪೇರಿಸಿ ವಿಜಯಿಯಾಯಿತು.
ಇನ್ನಿಂಗ್ಸ್ ಆರಂಭಿಸಿದ ಕ್ರಿಸ್ ಗೇಲ್ ಮತ್ತು ಎವಿನ್ ಲೂವಿಸ್ ಮೊದಲ ವಿಕೆಟಿಗೆ 40 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಆಬಳಿಕ ಒಂದು ರನ್ನಿನ ಅಂತರದಲ್ಲಿ ಗೇಲ್‌ವುತ್ತು ಹೋಪ್ ಅವರ ವಿಕೆಟನ್ನು ಕಳೆದು ಕೊಂಡ ವಿಂಡೀಸ್ ಆಘಾತಕ್ಕೆ ಸಿಲುಕಿತು. ಲೂವಿಸ್ ಮತ್ತು ಹೆಟ್‌ಮೇಯರ್ ಆಧ ರಿಸುವ ಪ್ರಯತ್ನ ಮುಂದುವರಿಸಿದರು. ಮೂರನೇ ವಿಕೆಟಿಗೆ ಅವರಿಬ್ಬರು 62 ರನ್ ಪೇರಿಸಿದರು. ಹೆಟ್‌ಮೇಯರ್ ವಿಕೆಟನ್ನು ಆ್ಯಸ್ಟಲ್ ಹಾರಿಸಿದರು.
Related Articles
Advertisement
ಗೆಲ್ಲಲು 249 ರನ್ ಗಳಿಸುವ ಸವಾಲು ಪಡೆದ ನ್ಯೂಜಿಲ್ಯಾಂಡ್ ಉತ್ತಮ ಆರಂಭ ಪಡೆಯಿತು. ಇನ್ನಿಂಗ್ಸ್ ಆರಂಭಿಸಿದ ಜಾರ್ಜ್ ವರ್ಕರ್ ಮತ್ತು ಕಾಲಿನ್ ಮುನ್ರೊ ಮೊದಲ ವಿಕೆಟಿಗೆ 108 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡದ ಗೆಲುವಿನ ಸಾಧ್ಯತೆಯನ್ನು ತೆರೆದಿಟ್ಟರು. ಇವರಿಬ್ಬರು 10 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡ ಬಳಿಕ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟಯ್ಲರ್ ಮೂರನೇ ವಿಕೆಟಿಗೆ 67 ರನ್ ಪೇರಿಸಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.
ಅಗ್ರ ಕ್ರಮಾಂಕದ ನಾಲ್ವರು ಆಟಗಾರ ರಾದ ವರ್ಕರ್ 57, ಮುನ್ರೊ 49, ವಿಲಿಯಮ್ಸನ್ 38 ಮತ್ತು ರಾಸ್ ಟಯ್ಲರ್ 49 ರನ್ ಗಳಿಸಿದರು. ಇದರಿಂದ ನ್ಯೂಜಿಲ್ಯಾಂಡ್ ಸುಲಭವಾಗಿ ಗೆಲುವು ಸಾಧಿಸುವಂತಾಯಿತು,
ಸಂಕ್ಷಿಪ್ತ ಸ್ಕೋರು ವೆಸ್ಟ್‌ಇಂಡೀಸ್ 9 ವಿಕೆಟಿಗೆ 248 (ಎವಿನ್ ಲೂವಿಸ್ 76, ಗೇಲ್ 22, ಹೆಟ್‌ಮೇಯರ್ 29, ಪೊವೆಲ್ 59, ಬ್ರೇಸ್‌ವೆಲ್ 55ಕ್ಕೆ 4, ಆ್ಯಸ್ಟಲ್ 33ಕ್ಕೆ 3, ಫೆರ್ಗ್ಯುಸನ 49ಕ್ಕೆ 2); ನ್ಯೂಜಿಲ್ಯಾಂಡ್ 46 ಓವರ್‌ಗಳಲ್ಲಿ 5 ವಿಕೆಟಿಗೆ 249 (ವರ್ಕರ್ 57, ಮುನ್ರೊ 49, ವಿಲಿಯಮ್ಸನ್ 38, ರಾಸ್ ಟಯ್ಲರ್ 49, ಹೋಲ್ಡರ್ 52ಕ್ಕೆ 2, ನರ್ಸ್ 55ಕ್ಕೆ 2). ಪಂದ್ಯಶ್ರೇಷ್ಠ: ಡಗ್ ಬ್ರೇಸ್‌ವೆಲ್