Advertisement
ಇದಕ್ಕೆ ಕಾರಣವಾದದ್ದು ರವಿವಾರದ ದ್ವಿತೀಯ ಮುಖಾಮುಖಿ. ಶ್ರೀಲಂಕಾ ಎದುರಿನ ಈ ಮುಖಾಮುಖಿಯನ್ನು ನ್ಯೂಜಿಲ್ಯಾಂಡ್ 102 ರನ್ನುಗಳಿಂದ ಭರ್ಜರಿಯಾಗಿ ಗೆದ್ದು ತನ್ನ ರನ್‌ರೇಟ್ ಹೆಚ್ಚಿಸಿಕೊಂಡು ದ್ವಿತೀಯ ಸ್ಥಾನಿಯಾಯಿತು. ನಾಲ್ಕೂ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಹಾಕಿದೆ.
ನ್ಯೂಜಿಲ್ಯಾಂಡ್ ಜತೆ ದ್ವಿತೀಯ ಸ್ಥಾನದ ರೇಸ್‌ನಲ್ಲಿರುವ ತಂಡ ಆತಿಥೇಯ ದಕ್ಷಿಣ ಆಫ್ರಿಕಾ. ಅದು ಮೂರರಲ್ಲಿ ಒಂದು ಪಂದ್ಯವನ್ನಷ್ಟೇ ಗೆದ್ದು 2 ಅಂಕ ಹೊಂದಿದೆ. ರನ್‌ರೇಟ್ +0.685. ಅಂದರೆ, ನ್ಯೂಜಿಲ್ಯಾಂಡ್‌ಗಿಂತ ಹೆಚ್ಚು. ದಕ್ಷಿಣ ಆಫ್ರಿಕಾ ತನ್ನ ಕೊನೆಯ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ದ್ವಿತೀಯ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಲಿದೆ. ಮೂರನ್ನೂ ಸೋತಿರುವ ಬಾಂಗ್ಲಾ ಈಗಾಗಲೇ ಕೂಟದಿಂದ ಹೊರಬಿದ್ದಿದೆ. ಅಕಸ್ಮಾತ್ ಬಾಂಗ್ಲಾ ಗೆದ್ದರಷ್ಟೇ ನ್ಯೂಜಿಲ್ಯಾಂಡ್‌ಗೆ ಚಾನ್ಸ್ ಎಂಬುದು ಈಗಿನ ಲೆಕ್ಕಾಚಾರ. ಆಗ ದಕ್ಷಿಣ ಆಫ್ರಿಕಾ ನಿರ್ಗಮಿಸುತ್ತದೆ.
Related Articles
ಶ್ರೀಲಂಕಾ ವಿರುದ್ಧ ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲ್ಯಾಂಡ್ ಮೂರೇ ವಿಕೆಟಿಗೆ 162 ರನ್ ಬಾರಿಸಿತು. ಬಳಿಕ ಲಂಕೆಯನ್ನು 15.5 ಓವರ್‌ಗಳಲ್ಲಿ 60 ರನ್ನಿಗೆ ಉರುಳಿಸಿತು.
Advertisement
ಕಿವೀಸ್ ಪರ ಓಪನರ್ ಸುಝೀ ಬೇಟ್ಸ್ 56, ವನ್‌ಡೌನ್ ಆಟಗಾರ್ತಿ ಅಮೇಲಿಯಾ ಕೆರ್ 66 ರನ್ ಬಾರಿಸಿದರು. ಬೌಲಿಂಗ್‌ನಲ್ಲಿ ಎಲ್ಲ 6 ಮಂದಿ ವಿಕೆಟ್ ಉಡಾಯಿಸಿದರು. ಇವರಲ್ಲಿ ಅಮೇಲಿಯಾ ಕೆರ್ 7ಕ್ಕೆ 2, ಲೀ ಟಹುಹು 12ಕ್ಕೆ 2 ವಿಕೆಟ್ ಕಿತ್ತು ಹೆಚ್ಚಿನ ಯಶಸ್ಸು ಸಾಧಿಸಿದರು. ಆಲ್‌ರೌಂಡ್ ಪ್ರದರ್ಶನವಿತ್ತ ಅಮೇಲಿಯಾ ಕೆರ್ ಪಂದ್ಯಶ್ರೇಷ್ಠ ಗೌರವ ಒಲಿಸಿಕೊಂಡರು.