Advertisement

ನ್ಯೂಜಿಲ್ಯಾಂಡಿಗೆ ಇನ್ನಿಂಗ್ಸ್‌ ಜಯ

07:30 AM Mar 27, 2018 | Team Udayavani |

ಆಕ್ಲಂಡ್‌: ಭಾರೀ ಮಳೆಯಿಂದ ಎರಡು ದಿನಗಳ ಆಟ ನಷ್ಟವಾಗಿದ್ದರೂ ಆತಿಥೇಯ ನ್ಯೂಜಿಲ್ಯಾಂಡ್‌ ತಂಡವು ಆಕ್ಲಂಡ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಇನ್ನಿಂಗ್ಸ್‌ ಅಂತರದಿಂದ ಸೋಲಿಸಲು ಯಶಸ್ವಿಯಾಗಿದೆ. ಮೊದಲ ಮೂರು ದಿನದ ಆಟ ಗಮನಿಸಿದಾಗ ಪಂದ್ಯ ಡ್ರಾಗೊಳ್ಳಬಹುದೆಂದು ಭಾವಿಸಲಾಗಿತ್ತು. ಆದರೆ ಅಂತಿಮ ಎರಡು ದಿನದ ಆಟದಲ್ಲಿ ನ್ಯೂಜಿಲ್ಯಾಂಡ್‌ ಅಮೋಘವಾಗಿ ಆಟವಾಡಿ ಜಯಭೇರಿ ಬಾರಿಸಿ ಸಂಭ್ರಮಿಸಿತು. ಉಭಯ ರಾಷ್ಟ್ರಗಳ ನಡುವಣ 102 ಟೆಸ್ಟ್‌ ಪಂದ್ಯ ಇತಿಹಾಸದಲ್ಲಿ ನ್ಯೂಜಿಲ್ಯಾಂಡ್‌ ತಂಡವು ಇಂಗ್ಲೆಂಡನ್ನು ಸೋಲಿಸಿದ್ದು ಇದು ಕೇವಲ 10ನೇ ಸಲವಾಗಿದೆ.

Advertisement

ಮೂರು ವಿಕೆಟಿಗೆ 132 ರನ್ನುಗಳಿಂದ ಅಂತಿಮ ದಿನದಾಟದ ಆಟ ಆರಂಭಿಸಿದ ಇಂಗ್ಲೆಂಡ್‌ ಸೋಲು ತಪ್ಪಿಸಲು ದಿನಪೂರ್ತಿ ಆಡಬೇಕಾಗಿತ್ತು. ಬೆನ್‌ ಸ್ಟೋಕ್ಸ್‌ ಮತ್ತು ಕ್ರಿಸ್‌ ವೋಕ್ಸ್‌ ಅತ್ಯಂತ ಎಚ್ಚರಿಕೆಯಿಂದ ಆಡಿ ಪಂದ್ಯ ಡ್ರಾಗೊಳಿಸಲು ಒದ್ದಾಡಿದರು. ಆದರೆ ಅಂತಿಮ ಅವಧಿಯ ಆಟದಲ್ಲಿ ನೀಲ್‌ ವ್ಯಾಗ್ನರ್‌ ಇವರಿಬ್ಬರನ್ನು ತನ್ನ ಬಲೆಗೆ ಬೀಳಿಸುತ್ತಲೇ ಇಂಗ್ಲೆಂಡಿನ ಸೋಲು ಖಚಿತವಾಯಿತು. ಅಂತಿಮವಾಗಿ ತಂಡ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ 320 ರನ್ನಿಗೆ ಆಲೌಟಾಗಿ ಇನ್ನಿಂಗ್ಸ್‌ ಮತ್ತು 49 ರನ್ನುಗಳಿಂದ ಸೋಲು ಅನುಭವಿಸಿತು. ಈ ಗೆಲುವಿನಿಂದ ನ್ಯೂಜಿಲ್ಯಾಂಡ್‌ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಸರಣಿಯ ಇನ್ನೊಂದು ಪಂದ್ಯ ಕ್ರೈಸ್ಟ್‌ಚರ್ಚ್‌ನಲ್ಲಿ ಶುಕ್ರವಾರ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು 
ಇಂಗ್ಲೆಂಡ್‌ 58 ಮತ್ತು 320 (ಸ್ಟೋನ್‌ಮ್ಯಾನ್‌ 55, ಜೋ ರೂಟ್‌ 51, ಮಾಲನ್‌ 23, ಬೆನ್‌ ಸ್ಟೋಕ್ಸ್‌ 66, ಬೇರ್‌ಸ್ಟೋ 26, ಮೊಯಿನ್‌ ಅಲಿ 28, ಕ್ರಿಸ್‌ ವೋಕ್ಸ್‌ 52, ಬೌಲ್ಟ್ 67ಕ್ಕೆ 3, ವ್ಯಾಗ್ನರ್‌ 77ಕ್ಕೆ 3, ಟಾಡ್‌ ಆ್ಯಸ್ಟಲ್‌ 39ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next