Advertisement

ODI World Cup: ಮೈಕಲ್‌ ಬ್ರೇಸ್‌ವೆಲ್‌ ಔಟ್‌

11:04 PM Jun 14, 2023 | Team Udayavani |

ವೆಲ್ಲಿಂಗ್ಟನ್‌: ಇನ್ನೂ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ ಗೊಂಡಿಲ್ಲ, ತಂಡಗಳೂ ಅಂತಿಮಗೊಂಡಿಲ್ಲ. ಅಷ್ಟರಲ್ಲಿ ನ್ಯೂಜಿಲ್ಯಾಂಡ್‌ನ‌ ದೊಡ್ಡದೊಂದು ವಿಕೆಟ್‌ ಉರುಳಿದೆ. ಆಲ್‌ರೌಂಡರ್‌ ಮೈಕಲ್‌ ಬ್ರೇಸ್‌ವೆಲ್‌ ಕಾಲಿನ ಮಾಂಸಖಂಡದ ಚಿಕಿತ್ಸೆಯಿಂದಾಗಿ ಹೊರಗುಳಿಯಲಿದ್ದಾರೆ.

Advertisement

ಬ್ರೇಸ್‌ವೆಲ್‌ ಬುಧವಾರ ಲಂಡನ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಅವರ ಚೇತರಿಕೆಗೆ ಕನಿಷ್ಠ 6ರಿಂದ 8 ತಿಂಗಳ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇಂಗ್ಲೆಂಡ್‌ನ‌ಲ್ಲೀಗ ನಡೆಯುತ್ತಿರುವ ಟಿ20 ಬ್ಲಾಸ್ಟ್‌ ಲೀಗ್‌ ವೇಳೆ ಬ್ರೇಸ್‌ವೆಲ್‌ ಈ ಸಮಸ್ಯೆಗೆ ಸಿಲುಕಿದರು.

ನಾಯಕ ಕೇನ್‌ ವಿಲಿಯಮ್ಸನ್‌ ಕೂಡ ಗಾಯಾಳಾಗಿದ್ದು, ವಿಶ್ವಕಪ್‌ ನಲ್ಲಿ ಆಡುವ ಸಾಧ್ಯತೆ ಕಡಿಮೆ ಎಂಬ ಸುದ್ದಿಯ ನಡುವೆಯೇ ನ್ಯೂಜಿಲ್ಯಾಂಡ್‌ಗೆ ಈ ಆಘಾತ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next