Advertisement

New Zealand-Afghanistan ಏಕೈಕ ಟೆಸ್ಟ್‌ : ಹೊರ ಮೈದಾನ ಒದ್ದೆ; ನಡೆಯದ ಆಟ

11:43 PM Sep 09, 2024 | Team Udayavani |

ಗ್ರೇಟರ್‌ ನೋಯ್ಡಾ: ನ್ಯೂಜಿಲ್ಯಾಂಡ್‌ ಮತ್ತು ಅಫ್ಘಾನಿಸ್ಥಾನ ನಡುವಣ ಏಕೈಕ ಟೆಸ್ಟ್‌ ಪಂದ್ಯದ ತಾಣವಾದ ಇಲ್ಲಿನ ಕ್ರೀಡಾ ಸಂಕೀರ್ಣದ ಹೊರ ಮೈದಾನ ಒದ್ದೆಯಾಗಿದ್ದರಿಂದ ಮೊದಲ ದಿನ ಆಟ ನಡೆಯಲಿಲ್ಲ.
ಅಂಪಾಯರ್ ಹಲವು ಬಾರಿ ಮೈದಾನ ಮತ್ತು ಪಿಚ್‌ ಪರಿಶೀಲಿಸಿದ ಬಳಿಕ ಆಟಗಾರರಿಗೆ ಫೀಲ್ಡಿಂಗ್‌ ಮಾಡಲು ಮೈದಾನ ಸಮರ್ಥವಿಲ್ಲ ಎಂದು ಪರಿಗಣಿಸಿ ದಿನದಾಟವನ್ನು ರದ್ದುಮಾಡಿದರು.

Advertisement

ಸೋಮವಾರ ಇಲ್ಲಿ ಮಳೆಯಾಗಿರಲಿಲ್ಲ. ಆದರೆ ಕಳೆದೊಂದು ವಾರದಿಂದ ಸುರಿದ ಭಾರೀ ಮಳೆಯಿಂದಾಗಿ ಮೈದಾನದಲ್ಲಿ ಬಹಳಷ್ಟು ನೀರು ನಿಂತ ಕಾರಣ ಈ ಸಮಸ್ಯೆ ಎದುರಾಗಿದೆ. ಆಧುನಿಕ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ಮೈದಾನದಲ್ಲಿ ನೀರು ಸಂಪೂರ್ಣ ಒಣಗಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next