Advertisement
ಗೆಲುವಿಗಾಗಿ 444 ರನ್ನುಗಳ ಕಠಿನ ಗುರಿ ಪಡೆದಿದ್ದ ವೆಸ್ಟ್ ಇಂಡೀಸ್ 3ನೇ ದಿನದಾಟದ ಅಂತ್ಯಕ್ಕೆ 2 ವಿಕೆಟಿಗೆ 30 ರನ್ ಮಾಡಿ ಸೋಲನ್ನು ಖಚಿತಪಡಿಸಿತ್ತು. 4ನೇ ದಿನವಾದ ಮಂಗಳವಾರ ಸ್ವಲ್ಪವೂ ಪ್ರತಿಹೋರಾಟ ತೋರ್ಪಡಿಸದೆ 203 ರನ್ನುಗಳಿಗೆ ಸರ್ವಪತನ ಕಂಡಿತು. ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು ನ್ಯೂಜಿಲ್ಯಾಂಡ್ ಇನ್ನಿಂಗ್ಸ್ ಹಾಗೂ 67 ರನ್ನುಗಳಿಂದ ಗೆದ್ದಿತ್ತು. ಇತ್ತಂಡಗಳಿನ್ನು 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖೀಯಾಗಲಿದ್ದು, ಇದು ಡಿ. 20ರಿಂದ ಮೊದಲ್ಗೊಳ್ಳಲಿದೆ.
ವೆಸ್ಟ್ ಇಂಡೀಸ್ ಲಂಚ್ ಒಳಗಾಗಿ 80 ರನ್ನಿಗೆ 5 ವಿಕೆಟ್ ಉರುಳಿಸಿಕೊಂಡು ತೀವ್ರ ಸಂಕಟಕ್ಕೆ ಸಿಲುಕಿತ್ತು. ಉಳಿವಿನ ಯಾವ ಮಾರ್ಗವೂ ಕೆರಿಬಿಯನ್ನರ ಮುಂದಿರಲಿಲ್ಲ. ರೋಸ್ಟನ್ ಚೇಸ್ ಮತ್ತು ರೇಮನ್ ರೀಫರ್ 6ನೇ ವಿಕೆಟಿಗೆ 78 ರನ್ ಒಟ್ಟುಗೂಡಿಸಿದರೂ ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಯಲ್ಲಿ ಕೆಮರ್ ರೋಶ್ ಪ್ರಯತ್ನದಿಂದ ಸ್ಕೋರ್ ಇನ್ನೂರರ ಗಡಿ ದಾಟಿತು, ಅಷ್ಟೇ. 64 ರನ್ ಮಾಡಿದ ಚೇಸ್ ವಿಂಡೀಸ್ ಸರದಿಯ ಟಾಪ್ ಸ್ಕೋರರ್ ಎನಿಸಿದರು (98 ಎಸೆತ, 8 ಬೌಂಡರಿ). ರೀಫರ್ 29, ರೋಶ್ 32 ರನ್ ಹೊಡೆದರು. ನ್ಯೂಜಿಲ್ಯಾಂಡ್ ಪರ ವ್ಯಾಗ್ನರ್ 3 ವಿಕೆಟ್ ಉರುಳಿಸಿದರೆ, ಸೌಥಿ, ಬೌಲ್ಟ್ ಮತ್ತು ಸ್ಯಾಂಟ್ನರ್ ತಲಾ 2 ವಿಕೆಟ್ ಕಿತ್ತರು. 17ನೇ ಶತಕ ಬಾರಿಸಿದ ರಾಸ್ ಟಯ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
Related Articles
Advertisement