Advertisement
ಪಂದ್ಯ ಗೆಲ್ಲಲು ಕೇವಲ 92 ರನ್ ಗುರಿ ಪಡೆದ ಕಿವೀಸ್ 14.4 ಓವರ್ ನಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಇನ್ನಿಂಗ್ಸ್ ನ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟಿದ ಗಪ್ಟಿಲ್ ನಾಲ್ಕನೇ ಎಸೆತಕ್ಕೆ ಔಟ್ ಆದರು. ಅನುಭವಿ ರಾಸ್ ಟೇಲರ್ (37) ಜೊತೆಗೂಡಿದ ಹೆನ್ರಿ ನಿಕೋಲ್ಸ್ (30) ಮುರಿಯದ 54 ರನ್ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಟ್ರೆಂಟ್ ಬೌಲ್ಟ್ ಅರ್ಹವಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಕುಸಿದ ಭಾರತ: ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತ ಕಿವೀಸ್ ವೇಗಿಗಳ ದಾಳಿಗೆ ಸಿಲುಕಿ ಕೇವಲ 92 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ವೇಗಿ ಟ್ರೆಂಟ್ ಬೌಲ್ಟ್ ಐದು ವಿಕೆಟ್ ಪಡೆದರೆ, ಗ್ರಾಂಡ್ ಹೋಮ್ ಮೂರು ವಿಕೆಟ್ ಕಬಳಿಸಿದರು. ಭಾರತದ ಪರ 18 ರನ್ ಗಳಿಸಿದ ಯಜುವೇಂದ್ರ ಚಾಹಲ್ ಇನ್ನಿಂಗ್ಸ್ ನ ಅತ್ಯಧಿಕ ರನ್ ಗಳಿಸಿದರು.
ಒಟ್ಟು 50 ಓವರ್ ಕೂಡ ನಡೆಯದ ಪಂದ್ಯ: ತಲಾ 50 ಓವರ್ ಗಳ ಏಕದಿನ ಪಂದ್ಯದಲ್ಲಿ ಒಟ್ಟು ಐವತ್ತು ಓವರ್ ಕೂಡಾ ನಡೆಯಲಿಲ್ಲ. ಭಾರತ ತಂಡ 30.5 ಓವರ್ ನಲ್ಲಿ ತನ್ನ ಆಟ ಮುಗಿಸಿದರೆ, ನ್ಯೂಜಿಲ್ಯಾಂಡ್ ಕೇವಲ 14.4 ಓವರ್ ನಲ್ಲೆ ಗುರಿ ಬೆನ್ನಟ್ಟಿತು.212 ಎಸೆತಗಳ ಅಂತರದಿಂದ ಸೋಲುಂಡ ಭಾರತಕ್ಕೆ ಇದು ಇತಿಹಾಸದಲ್ಲೇ ಅತೀ ಹೆಚ್ಚು ಅಂತರದ ಸೋಲಾಯಿತು.