ನ್ಯೂಯಾರ್ಕ್: ಕ್ರಿಕೆಟ್ ಲೋಕದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರ ಪ್ರಸಿದ್ದಿ ಎಲ್ಲಾ ಕಡೆಯಿದೆ. ವಿಶ್ವದ ಅತ್ಯಂತ ಸುಪ್ರಸಿದ್ದ ಕ್ರೀಡಾಪಟುಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ಅವರ ವರ್ಚಸ್ಸು ಇದೀಗ ಕ್ರಿಕೆಟ್ ಅಷ್ಟೇನೂ ಪ್ರಚಾರ ಪಡೆಯದ ಅಮೆರಿಕದಲ್ಲೂ ಹೆಚ್ಚಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇದೀಗ ನ್ಯೂಯಾರ್ಕ್ ನ ಪ್ರಸಿದ್ದ ಟೈಮ್ಸ್ ಸ್ಕ್ಯಾರ್ ನಲ್ಲಿ ವಿರಾಟ್ ಕೊಹ್ಲಿಯ ಆಳೆತ್ತರದ ಪ್ರತಿಮೆಯನ್ನು ನಿಲ್ಲಿಸಲಾಗಿದೆ.
ಕೊಹ್ಲಿಯ ಜನಪ್ರಿಯತೆ ಎಷ್ಟಿದೆಯೆಂದರೆ 2028 ರಲ್ಲಿ ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳುವಲ್ಲಿ ಕೊಹ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಕೊಹ್ಲಿಯ ಪ್ರತಿಮೆಯು ಅವರು ಬ್ರಾಂಡ್ ಅಂಬಾಸಿಡರ್ ಆಗಿರುವ ಮ್ಯಾಟ್ರೆಸ್ ಕಂಪನಿಯೊಂದರ ಮಾರ್ಕೆಟಿಂಗ್ ಅಭಿಯಾನದ ಭಾಗವಾಗಿದೆ.
ಹಾಸಿಗೆಗಳಿಂದ ಒದಗಿಸಲಾದ ಸೌಕರ್ಯವನ್ನು ಹೈಲೈಟ್ ಮಾಡಲು ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಅದೇ ವಿಡಿಯೋವನ್ನು ಮ್ಯಾಟ್ರೆಸ್ ಕಂಪನಿ ಹಂಚಿಕೊಂಡಿದೆ.
ಈ ತಿಂಗಳ ಆರಂಭದಲ್ಲಿ ವಿರಾಟ್ ಕೊಹ್ಲಿ ಅವರು ನ್ಯೂಯಾರ್ಕ್ ನಲ್ಲಿ ಆಡಿದ್ದರು. ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ಭಾಗವಾಗಿರುವ ವಿರಾಟ್ ನ್ಯೂಯಾರ್ಕ್ ನ ನಸ್ಸೌ ಸ್ಟೇಡಿಯಂನಲ್ಲಿ ಆಡಿದ್ದರು.