Advertisement

ಕೋವಿಡ್ 19 ವೈರಸ್: ನ್ಯೂಯಾರ್ಕ್ ನಲ್ಲಿ ಒಂದೇ ದಿನ 731 ಸಾವು, ರೋಗಿಗಳ ಸಂಖ್ಯೆ ಇಳಿಮುಖ

10:31 AM Apr 08, 2020 | Nagendra Trasi |

ನ್ಯೂಯಾರ್ಕ್: ಮಾರಣಾಂತಿಕ ಕೋವಿಡ್ 19 ಸೋಂಕು ಪೀಡಿತರು ಒಂದೇ ದಿನದಲ್ಲಿ 731 ಜನರು ನ್ಯೂಯಾರ್ಕ್ ನಲ್ಲಿ ಸಾವನ್ನಪ್ಪಿರುವುದು ದಾಖಲೆ ಪ್ರಮಾಣದ್ದಾಗಿದೆ ಎಂದು ಗವರ್ನರ್ ಆ್ಯಂಡ್ರ್ಯೂ ಕ್ಯೂಮೋ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

ನೂತನ ಕೋವಿಡ್ 19 ಸೋಂಕಿಗೆ ಸೋಮವಾರ ಒಂದೇ ದಿನದಲ್ಲಿ 731 ಜನರು ಸಾವನ್ನಪ್ಪಿದ್ದು, ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 5,489ಕ್ಕೆ ಏರಿದೆ. ಕಳೆದ ಶುಕ್ರವಾರ ಒಂದೇ ದಿನದಲ್ಲಿ 630 ಕೋವಿಡ್ 19 ಸೋಂಕು ಪೀಡಿತರು ಸಾವನ್ನಪ್ಪುವ ಮೂಲಕ ದಾಖಲೆಯಾಗಿತ್ತು.

ಕಳೆದ ಎರಡು ದಿನಗಳ ಕಾಲ ಕೋವಿಡ್ ಸೋಂಕು ಪೀಡಿತರ ಸಂಖ್ಯೆ ಇಳಿಕೆಯಾಗಿತ್ತು. ಅಲ್ಲದೇ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕೂಡಾ ಇಳಿಮುಖವಾಗಿತ್ತು ಎಂದು ಗವರ್ನರ್ ತಿಳಿಸಿದ್ದಾರೆ.

ಕಳೆದ 24ಗಂಟೆಯಲ್ಲಿ ಕೋವಿಡ್ 19 ಸೋಂಕಿಗೆ ಒಳಗಾದ ರೋಗಿಗಳು ತುರ್ತು ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ 100ಕ್ಕಿಂತ ಕಡಿಮೆ ಇದ್ದು, ಇದು ಕಳೆದ ಮಾರ್ಚ್ 21ರಿಂದ ಕಡಿಮೆ ಪ್ರಮಾಣದ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next