Advertisement

ನ್ಯೂಯಾರ್ಕ್‌ ಓಪನ್‌: ಒಪೆಲ್ಕ ಫೈನಲ್‌ ಪ್ರವೇಶ

12:30 AM Feb 18, 2019 | Team Udayavani |

ನ್ಯೂಯಾರ್ಕ್‌: ಅಮೆರಿಕದ ರಿಲೀ ಒಪೆಲ್ಕ ತನ್ನದೇ ದೇಶದ ಅಗ್ರ ಶ್ರೇಯಾಂಕಿತ ಆಟಗಾರ ಜಾನ್‌ ಇಸ್ನರ್‌ ವಿರುದ್ಧ ರೋಚಕ ಗೆಲುವು ದಾಖಲಿಸಿ “ನ್ಯೂಯಾರ್ಕ್‌ ಓಪನ್‌’ ಟೆನಿಸ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ್ದಾರೆ.

Advertisement

ತೀವ್ರ ಹೋರಾಟದಿಂದ ಕೂಡಿದ ಈ “ಲಂಬೂ’ ಟೆನಿಸಿಗರ ನಡುವಿನ ಪಂದ್ಯದ ಮೂರೂ ಸೆಟ್‌ಗಳು ಟೈ-ಬ್ರೇಕರ್‌ನಲ್ಲಿ ಇತ್ಯರ್ಥ ಕಂಡವು. ಮೊದಲ ಸೆಟ್‌ ಇಸ್ನರ್‌ ಪಾಲಾಗಿತ್ತು. ಒಪೆಲ್ಕ ಗೆಲುವಿನ ಅಂತರ 6  -7 (8-10), 7-6 (16-14), 7-6 (7-4). ಈ ಜಯದೊಂದಿಗೆ ಒಪೆಲ್ಕ ಮೊದಲ ಎಟಿಪಿ ಪ್ರಶಸ್ತಿಗೆ ಹತ್ತಿರವಾಗಿದ್ದಾರೆ.

ಫೈನಲ್‌ನಲ್ಲಿ ಒಪೆಲ್ಕ ಕೆನಡಾದ ಬ್ರೇಡನ್‌ ಶು°ರ್‌ ಅವರನ್ನು ಎದುರಿಸಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಶು°ರ್‌ ಅಮೆರಿಕದ ಸ್ಯಾಮ್‌ ಕ್ವೆರ್ರಿ ವಿರುದ್ಧ 7-6 (9-7), 4-6, 6-3 ಅಂತರದ ಗೆಲುವು ದಾಖಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next