ಹುಬ್ಬಳ್ಳಿ: ಜನರಲ್ಲಿ ಬೈಸಿಕಲ್ ಬಳಕೆಗೆ ಉತ್ತೇಜನ ನೀಡಲು ಹಾಗೂ ಸಾರ್ವಜನಿಕ ಬಳಕೆಗಾಗಿ ಸುಮಾರು 8.5 ಕೋಟಿ ರೂ.ವೆಚ್ಚದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕಳೆದೆರಡು ವರ್ಷಗಳಿಂದ ಚಾಲನೆಯಲ್ಲಿರುವ “ಸವಾರಿ’ ಪಬ್ಲಿಕ್ ಬೈಸಿಕಲ್ ಸಿಸ್ಟಮ್ ಬಳಕೆದಾರರನ್ನು ಆಕರ್ಷಿಸಲು ಹೊಸ ವರ್ಷದ ವಿಶೇಷ ಯೋಜನೆ ಜಾರಿ ಮಾಡಿದೆ.
Advertisement
ಬೈಸಿಕಲ್ ಬಳಕೆದಾರರು ಆರಂಭದ ಒಂದು ತಾಸು ಉಚಿತವಾಗಿ ಬೈಸಿಕಲ್ ಸವಾರಿ ಮಾಡಬಹುದು. ಈ ಯೋಜನೆ ಜನವರಿ 1ರಿಂದ ಜಾರಿಯಾಗಿದೆ. ಪಬ್ಲಿಕ್ ಬೈಸಿಕಲ್ ಸಿಸ್ಟಮ್ ಉಸ್ತುವಾರಿ ಹಾಗೂ ನಿರ್ವಹಣೆ ನೋಡಿಕೊಳ್ಳುತ್ತಿರುವ ಟ್ರಿನಿಟಿ ಟೆಕ್ನಾಲಜೀಸ್ ಮತ್ತು ಸಾಫ್ಟ್‌ವೇರ್ ಸೋಲೋಷನ್ಸ್ ಪ್ರೈವೇಟ್ ಲಿಮಿಟೆಡ್ ಎಲ್ಲ 34 ಡಾಕಿಂಗ್ ಸ್ಟೇಷನ್‌ಗಳಲ್ಲಿ ಬಳಕೆದಾರರಿಗೆ ಅಂಟಿಸಿದ್ದು, ನಾಳೆ ಬೆಳಿಗ್ಗೆಯಿಂದಲೇ ಈ ಹೊಸ ಪ್ರಯತ್ನ ಆರಂಭವಾಗುವುದು ಎಂದು ಮುಖ್ಯಸ್ಥ ರಜನೀಶ್ ಗಂಜ್ಯಾಳ “ಉದಯವಾಣಿ’ಗೆ ತಿಳಿಸಿದ್ದಾರೆ.
ಸವಾರಿ ಯೋಜನೆ 3ನೇ ವರ್ಷದಲ್ಲಿ ಪದಾರ್ಪಣೆ ಮಾಡುತ್ತಿರುವ ಬೈಸಿಕಲ್ ಸೇವೆ ಹೆಚ್ಚಿನ ಬಳಕೆದಾರರಿಗೆ ಆಕರ್ಷಿಸುವ ನಿಟ್ಟಿನಲ್ಲಿ ಬಳಕೆದಾರರಿಗೆ ಒಂದು ತಾಸು ಉಚಿತ ರೈಡ್ ಕೊಡುವ ಆಫರ್ ನೀಡಲಾಗುತ್ತಿದೆ. ಇದರಿಂದ ಹೆಚ್ಚಿನ ಹೊಸ ಬೈಸಿಕಲ್ ಬಳಕೆದಾರರು ರೆಜಿಸ್ಟ್ರೇಷನ್ ಮಾಡಿಸುವ ನಿರೀಕ್ಷೆ ಹೊಂದಲಾಗಿದೆ. ಈಗಾಗಲೇ ಕಳೆದ ಎರಡು ವರ್ಷಗಳಲ್ಲಿ ವಿವಿಧ ಪ್ರಮೋಷನ್ ಕಾರ್ಯಕ್ರಮಗಳನ್ನು ಮಾಡಿದ್ದು, ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಇನ್ನುಳಿದವುಗಳನ್ನು ಆಯೋಜಿಸಲಾಗಿತ್ತು. ಈಗ ಇನ್ನೂ ಹೆಚ್ಚಿನ ಜನರಿಗೆ ಆಕರ್ಷಿಸುವ ಪ್ರಯತ್ನ ನಮ್ಮದಾಗಿದೆ ಎಂದರು. ನಗರದ ವಿವಿಧ ಸ್ಥಳಗಳಲ್ಲಿ 34 ಬೈಸಿಕಲ್ ನಿಲ್ದಾಣಗಳನ್ನು ಮಾಡಿದ್ದು, 340 ಬೈಸಿಕಲ್‌ಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಹಲವಾರು ಎಲೆಕ್ಟ್ರಿಕ್ ಮಾದರಿ ಹೊಂದಿದೆ. ಈ ಬೈಸಿಕಲ್ ಕಾರ್ಯಾಚರಣೆಯನ್ನು ಟ್ರಿನಿಟಿ ಟೆಕ್ನಾಲಜೀಸ್ ಸಾಫ್ಟ್ ವೇರ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿದ್ದು, ಅದರ ನಿರ್ವಹಣೆ ಮಾಡುತ್ತಿದೆ. ಕೆಲವು ಬೈಸಿಕಲ್ ನಿಲ್ದಾಣಗಳಲ್ಲಿ ಸದಸ್ಯರು ಹಾಗೂ ಸಂಚಾರಿಗಳ ಕೊರತೆ ಎದ್ದು ಕಾಣುತ್ತಿದ್ದು, ಅಂತಹ ನಿಲ್ದಾಣಗಳನ್ನು ಬದಲಾಯಿಸುವ ಅಥವಾ ಬೇರೆಡೆ ಸ್ಥಳಾಂತರಿಸುವ ಚಿಂತನೆ ನಡೆದಿದೆ.
Related Articles
ಸವಾರಿಗಾಗಿ ಸ್ಥಳದಲ್ಲಿರುತ್ತದೆ. ಬೈಸಿಕಲ್ ಟ್ರ್ಯಾಕಿಂಗ್ ಮತ್ತು ಸ್ವಯಂಚಾಲಿತ ಲಾಕಿಂಗ್ ವ್ಯವಸ್ಥೆ ಹೊಂದಿದ್ದು, ಸ್ಮಾರ್ಟ್ ತಂತ್ರಜ್ಞಾನ ಬಳಸಲಾಗಿದೆ. ಸುರಕ್ಷಿತ ಮತ್ತು ಪರಿಣಾಮಕಾರಿ ಬೈಸಿಕಲ್ ನಿರ್ವಹಣೆ ಜಾರಿ ಮಾಡಲಾಗಿದೆ.
Advertisement
ಪ್ರತಿ ಬೈಸಿಕಲ್ ನಿಲ್ದಾಣಗಳು ಸಿಸಿ ಕ್ಯಾಮರಾ ಕಣ್ಗಾವಲು ಹೊಂದಿದೆ. ಸವಾರರ ಸುರಕ್ಷತೆ ಮತ್ತು ಸೂಕ್ತ ವ್ಯವಸ್ಥೆ ನೀಡಲು ಬೈಸಿಕಲ್‌ಗಳು ನಿಯಮಿತ ನಿರ್ವಹಣೆ ತಪಾಸಣೆಗೆ ಮಾಡಿಸಲಾಗುತ್ತಿದೆ. ಬೈಸಿಕಲ್ ಒಂದು ಗಂಟೆ ಉಚಿತ ಸೇವೆಯಿಂದ ಸದಸ್ಯರಿಗೆ ಪ್ರೋತ್ಸಾಹ, ಹೊಸ ಸದಸ್ಯರ ಆಕರ್ಷಿಸುವ ನೀರಿಕ್ಷೆ ನಮ್ಮದಾಗಿದೆ. ಜತೆಗೆ ಹೆಚ್ಚಿನ ಬೈಸಿಕಲ್ ನಿಲ್ದಾಣಗಳನ್ನು ಮಾಡುವ ಚಿಂತನೆ ನಡೆದಿವೆ ಎಂದು ರಜನೀಶ ಗಂಜ್ಯಾಳ ತಿಳಿಸಿದ್ದಾರೆ.
ಬೈಸಿಕಲ್ ಬಳಕೆ ಉತ್ತೇಜಿಸಲು ಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಿ ಈಗ “ಸವಾರಿ’ ಪಿಬಿಎಸ್‌ನ ಮೂರನೇ ವರ್ಷದ ಸಂಭ್ರಮಾಚರಣೆ ನಿಮಿತ್ತ ಪ್ರತಿದಿನ ಒಂದು ಗಂಟೆ ಉಚಿತ ಸವಾರಿಯ ವಿಶೇಷ ಯೋಜನೆ ಯೊಂದಿಗೆ ನೋಂದಣಿ ಹೆಚ್ಚಿಸಲು ನಿರ್ಧರಿಸಿದ್ದೇವೆ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯ ನೋಂದಣಿ ಮತ್ತು ಹೆಚ್ಚಿನ ಸೈಕಲ್ ಸವಾರ ನಿರೀಕ್ಷೆ ಹೊಂದಿದ್ದೇವೆ.ರಜನೀಶ ಗಂಜ್ಯಾಳ,
ಟ್ರಿನಿಟಿ ಟೆಕ್ನಾಲಜೀಸ್ ಮತ್ತು ಸಾಫ್ಟ್‌ವೇರ್
ಸೊಲ್ಯೂಷನ್ಸ್ ಪ್ರೈವೇಟ್ ಮುಖ್ಯಸ್ಥ.