Advertisement

New Year Test: ಪಾಕ್‌ ತಂಡಕ್ಕೆ ನೂತನ ಓಪನರ್‌

11:38 PM Dec 31, 2023 | Team Udayavani |

ಸಿಡ್ನಿ: ಸಿಡ್ನಿ ಯಲ್ಲಿ ಜ. 3ರಂದು ಆರಂಭವಾಗಲಿರುವ “ನ್ಯೂ ಇಯರ್‌’ ಟೆಸ್ಟ್‌ ಪಂದ್ಯಕ್ಕೆ ಪಾಕಿಸ್ಥಾನ ನೂತನ ಆರಂಭ ಕಾರನನ್ನು ಕಣಕ್ಕಿಳಿಸುವ ಯೋಜನೆಯಲ್ಲಿದೆ. 21 ವರ್ಷದ ಸೈಮ್‌ ಅಯೂಬ್‌ ಟೆಸ್ಟ್‌ ಪದಾ ರ್ಪಣೆ ಮಾಡುವುದು ಬಹು ತೇಕ ಖಚಿತಗೊಂಡಿದೆ. ಇನ್ನೊಂದೆಡೆ ಆಸ್ಟ್ರೇಲಿ ಯದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ.

Advertisement

ಅನುಭವಿ ಆರಂಭಕಾರ ಇಮಾಮ್‌ ಉಲ್‌ ಹಕ್‌ ಅವರ ಬ್ಯಾಟಿಂಗ್‌ ತೀವ್ರ ಟೀಕೆಗೆ ಗುರಿಯಾಗಿರುವ ಕಾರಣ ಸೈಮ್‌ ಅಯೂಬ್‌ ಅವರನ್ನು ಆಡಿಸಲು ಪಾಕ್‌ ನಿರ್ಧರಿಸಿದೆ. ಕರಾಚಿಯವರಾದ ಅಯೂಬ್‌ ಟಿ20ಯಲ್ಲಿ ಯಶಸ್ಸು ಕಂಡಿರುವ ಆಟಗಾರ. ಈ ವರ್ಷ 8 ಟಿ20 ಪಂದ್ಯಗಳನ್ನು ಆಡಿದ್ದಾರೆ. ಆದರೆ ಟೆಸ್ಟ್‌ನಲ್ಲಿ ಎಷ್ಟರ ಮಟ್ಟಿಗೆ ಯಶಸ್ಸು ಪಡೆಯಬಹುದೆಂಬ ಕುತೂಹಲವಿದೆ.

ಪಾಕಿಸ್ಥಾನದ ಗಾಯಾಳು ಸ್ಪಿನ್ನರ್‌ ಅಬ್ರಾರ್‌ ಅಹ್ಮದ್‌ ಅಂತಿಮ ಟೆಸ್ಟ್‌ ಪಂದ್ಯಕ್ಕೂ ಲಭ್ಯರಾಗುವ ಸಾಧ್ಯತೆ ಇಲ್ಲ. ಇವರಿಗೆ ಬದಲಿ ಆಟಗಾರನಾಗಿ ಬಂದ ಆಫ್ ಸ್ಪಿನ್ನರ್‌ ಸಾಜಿದ್‌ ಖಾನ್‌ ಅವಕಾಶ ಪಡೆ ಯಬಹುದು.
3 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯ 2-0 ಮುನ್ನಡೆಯಲ್ಲಿದೆ. ಪಾಕಿಸ್ಥಾನ ತಂಡ ಆಸ್ಟ್ರೇಲಿಯದಲ್ಲಿ ಸತತ 16 ಟೆಸ್ಟ್‌ ಪಂದ್ಯಗಳನ್ನು ಸೋತ ಸಂಕಟದಲ್ಲಿದೆ.

ವಾರ್ನರ್‌ ವಿದಾಯ ಪಂದ್ಯ
ಇದು ಆಸ್ಟ್ರೇಲಿಯದ ಆರಂಭಕಾರ ಡೇವಿಡ್‌ ವಾರ್ನರ್‌ ಅವರ ವಿದಾಯ ಟೆಸ್ಟ್‌ ಪಂದ್ಯವೂ ಆಗಿದೆ. 37 ವರ್ಷದ ವಾರ್ನರ್‌ ತಮ್ಮ 12 ವರ್ಷಗಳ ಟೆಸ್ಟ್‌ ಬದುಕಿಗೆ ಊರಿನ ಅಂಗಳದಲ್ಲೇ ತೆರೆ ಎಳೆಯುತ್ತಿರುವುದು ವಿಶೇಷ.
ತೀವ್ರ ಬ್ಯಾಟಿಂಗ್‌ ಬರಗಾಲದಲ್ಲಿದ್ದ ಡೇವಿಡ್‌ ವಾರ್ನರ್‌ ಈ ಸರಣಿಯಲ್ಲಿ ಆಡುವುದೇ ಅನುಮಾನವಿತ್ತು. ಆದರೆ ಪರ್ತ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲೇ 164 ರನ್‌ ಬಾರಿಸಿ ಟೀಕಾಕಾರರಿಗೆ ಬ್ಯಾಟಿನ ಮೂಲಕವೇ ಉತ್ತರವಿತ್ತರು.

ಈ ಟೆಸ್ಟ್‌ ಪಂದ್ಯಕ್ಕಾಗಿ ಆಸ್ಟ್ರೇಲಿಯದ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಸಂಭವಿಸಿಲ್ಲ. ಬಾಕ್ಸಿಂಗ್‌ ಡೇ ಟೆಸ್ಟ್‌ ಗೆದ್ದ ಹನ್ನೊಂದರ ಬಳಗವನ್ನೇ ಕಣಕ್ಕಿಳಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next