Advertisement

ಫೆಬ್ರವರಿಯಲ್ಲಿ ನ್ಯೂ ಇಯರ್‌

10:52 AM Feb 13, 2018 | Team Udayavani |

ವಿಡಿಯೋ ಆಲ್ಬಂ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇವೆ. ತಮ್ಮ ಪ್ರತಿಭೆಯನ್ನು ತೋರಿಸಲು ವೀಡಿಯೋ ಆಲ್ಬಂಗಳು ವೇದಿಕೆಯಾಗುತ್ತದೆ. ಈಗ ಹೊಸದೊಂದು ವೀಡಿಯೋ ಆಲ್ಬಂ ಬಿಡುಗಡೆಯಾಗಿದೆ.

Advertisement

ಅದು “ಹ್ಯಾಪಿ ನ್ಯೂ ಇಯರ್‌’. ಮಂಜು ಕವಿ ಎನ್ನುವವರು ಸಾಹಿತ್ಯ ಬರೆದು ಈ ವೀಡಿಯೋ ಆಲ್ಬಂ ಅನ್ನು ನಿರ್ದೇಶಿಸಿದ್ದಾರೆ. ಪ್ರೀತಿ, ಪ್ರೇಮದ ಕುರಿತಾದ ಈ ಆಲ್ಬಂನಲ್ಲಿ ಅಕ್ಷಯ್‌ ಜೈನ್‌ ಕಾಣಿಸಿಕೊಂಡಿದ್ದಾರೆ. ನಿರ್ಮಾಣವೂ ಅವರದ್ದೇ. ಇತ್ತೀಚೆಗೆ ಈ ಆಲ್ಬಂ ಅನ್ನು ಟೆನ್ನಿಸ್‌ ಕೃಷ್ಣ ಅವರು ಬಿಡುಗಡೆ ಮಾಡಿದರು.

ಮಂಜು ಕವಿ ಅವರಿಗೆ ವೀಡಿಯೋ ಆಲ್ಬಂವೊಂದನ್ನು ಮಾಡಬೇಕೆಂಬ ಆಸೆ ಇತ್ತಂತೆ. ಅದು ಈಗ “ಹ್ಯಾಪಿ ನ್ಯೂ ಇಯರ್‌’ ಮೂಲಕ ಈಡೇರಿದೆಯಂತೆ. ಇಲ್ಲಿ ಇಂದಿನ ಟ್ರೆಂಡ್‌ಗೆ ತಕಂತಹ ಲಿರಿಕ್ಸ್‌ ಇರುವುದರಿಂದ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆಯಂತೆ.  ಆಲ್ಬಂಗೆ ಹರಿಬಾಬು ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next