Advertisement

New Year 2024; ಬೆಂಗಳೂರಿನಲ್ಲಿ ನೂಕುನುಗ್ಗಲು: ಮಹಿಳೆ ಅಸ್ವಸ್ಥ

08:17 PM Dec 31, 2023 | Team Udayavani |

ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಭಾನುವಾರ ರಾತ್ರಿ ಜೋರಾಗಿದ್ದು, ಬ್ರಿಗೇಡ್ ರಸ್ತೆಯಲ್ಲಿ ಭಾರಿ ಸಂಖ್ಯೆಯ ಜನರು ಜಮಾವಣೆಯಾಗಿದ್ದು ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿದೆ.

Advertisement

ಪ್ರಾಥಮಿಕ ಮಾಹಿತಿ ಪ್ರಕಾರ ಯುವತಿಯೊಬ್ಬಳಿಗೆ ಯುವಕನೊಬ್ಬ ನೂಕುನುಗ್ಗಲಿನಲ್ಲಿ ಅಸಹ್ಯವಾಗಿ ವರ್ತಿಸಿ ಕಿರುಕುಳ ನೀಡಿದ್ದು, ಯುವತಿಯ ಪ್ರಿಯಕರ ಆಕ್ರೋಶಗೊಂಡು ಕಿರುಕುಳ ನೀಡಿದವನಿಗೆ ಗೂಸಾ ನೀಡಿದ್ದಾನೆ.

ಇನ್ನೊಂದೆಡೆ ಜನದಟ್ಟಣೆಯ ನಡುವೆ ಸಿಲುಕಿಕೊಂಡ ಮಹಿಳೆಯೊಬ್ಬರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರ ನೆರವಿಗೆ ಮಹಿಳಾ ಪೊಲೀಸರು ಆಗಮಿಸಿ ನೀರು ನೀಡಿ ಪಕ್ಕಕ್ಕೆ ಕರೆದೊಯ್ದಿದ್ದಾರೆ.

ನಗರದ ಸಂಭ್ರಮಾಚರಣೆ ನಡೆಯುವ ವಿವಿಧ ಸ್ಥಳಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಭಾರೀ ಸಂಖ್ಯೆಯ ಜನರು ರಸ್ತೆಗಳಿಗೆ ಇಳಿದು ಸಂಭ್ರಮಾಚರಣೆಗೆ ಮುಂದಾಗಿರುವುದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next