Advertisement
ಕಾರವಾರ, ಮಾಜಾಳಿ, ಕಾಳಿ ನದಿ, ಹನಿಬೀಚ್, ಗೋಕರ್ಣ, ಕುಡ್ಲೆ, ಓಂ ಬೀಚ್, ಕುಮಟಾ ಹೆಡ್ ಬಂದರ್, ಅಪ್ಸರಕೊಂಡ-ಕಾಸರಕೋಡ, ಮುಡೇìಶ್ವರ, ಸಾಥೋಡಿ ಪಾಲ್ಸ್, ಜೋಗ ಪಾಲ್ಸ್, ಬುರುಡೆ ಪಾಲ್ಸ್‌ಗಳಲ್ಲಿ ತರಬೇತಿ ಪಡೆದ 26 ಜೀವರಕ್ಷಕ ಸಿಬ್ಬಂದಿ ನೇಮಿಸಿದ್ದು, ಮೂವರು ಮೇಲ್ವಿಚಾರಕರಿದ್ದಾರೆ. ಇವರು ಈಗಾಗಲೇ ವಿವಿಧ ಕಡೆ 14 ಜೀವಗಳನ್ನು ಉಳಿಸಿದ್ದಾರೆ. ಕಡಲತೀರಗಳಲ್ಲಿ ಕಾವಲು ಗೋಪುರ ನಿರ್ಮಿಸಲಾಗಿದೆ. ಕಾರವಾರಕ್ಕೆ 65 ಲಕ್ಷ ರೂ. ಬೆಲೆಯ ಬೀಚ್ ಸ್ವತ್ಛತಾ ಯಂತ್ರವನ್ನು ಖರೀದಿಸಲಾಗಿದ್ದು, ಇನ್ನೂ ಮೂರು ಬರಲಿದೆ. ಕಾಳಿ ತೀರದಲ್ಲಿ ರಿವರ್ ಗಾರ್ಡನ್ ನಿರ್ಮಿಸಿದ್ದು, ಇತ್ತೀಚೆಗೆ ದ್ರಾಕ್ಷಾರಸ ಉತ್ಸವ ಯಶಸ್ವಿಯಾಯಿತು. ಅಲ್ಲಿ ಆಹಾರ ಮಳಿಗೆ ಬರಲಿದೆ. ಸುರಕ್ಷತಾ ಜಲಸಾಹಸ ಕ್ರೀಡೆಗಳ ಆಯೋಜನೆಯೊಂದಿಗೆ ಸಮಿತಿಯ
ಕಾರ್ಯಚಟುವಟಿಕೆಗೆ ಆದಾಯವನ್ನು ಗಳಿಸುವ ಮಾರ್ಗ ಕಂಡುಕೊಂಡಿದೆ. ಮುಡೇìಶ್ವರ, ಓಂ, ಕುಡ್ಲೆ, ಗೋಕರ್ಣ, ಕಾಸರಕೋಡ,
ಅಪ್ಸರಕೊಂಡ ಮತ್ತು ಕಾರವಾರ ಠಾಗೋರ ಬೀಚ್‌ಗಳಲ್ಲಿ ಜಲಸಾಹಸ ಕ್ರೀಡೆಗಳನ್ನು ನಡೆಸಲು ಟೆಂಡರ್ ಆಹ್ವಾನಿಸಿ, ಸಮುದ್ರದಲ್ಲಿ
ಸ್ಪೀಡ್ ಬೋಟ್, ಕಯಾಕಿಂಗ್, ಜೆಟ್ ಸ್ಕೈ, ಬೋಟ್ ಪ್ಯಾರ್, ಸೈಲಿಂಗ್ ನಂತಹ ಜಲಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಪ್ರವಾಸಿಗರಿಗೆ ಹೊರೆಯಾಗದಂತೆ ದರ ನಿಗದಿಪಡಿಸಲಾಗಿದೆ.
ಸಮಿತಿ ಕೈಜೋಡಿಸಲಿದ್ದು, ಧಾರ್ಮಿಕ ಸ್ಥಳ, ಜಲಪಾತಗಳಲ್ಲಿ ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ನಿರ್ಧರಿಸಿದೆ. ಸಮಿತಿ ಒಂದೇ ವರ್ಷದಲ್ಲಿ ಜಿಲ್ಲೆಯ 20 ಕಡಲ ತೀರದಲ್ಲಿ ಪ್ರವಾಸಿ ಚಟುವಟಿಕೆಯನ್ನು ಅಭಿವೃದ್ಧಿಗೊಳಿಸಿದೆ. ರಜಾದಿನಗಳಲ್ಲಿ ಕಡಲ ತೀರ ಜನಸಂದಣಿಯಿಂದ ತುಂಬಿರುತ್ತದೆ. ಅರೆಸರ್ಕಾರಿ ಸಮಿತಿ ಇಲ್ಲಿ ಪರಿಣಾಮಕಾರಿಯಾಗಿ ಕೆಲಸಮಾಡಿದ್ದಕ್ಕೆ ಅಭಿನಂದನೆ ಸಲ್ಲಬೇಕು.
Related Articles
ಗುರುದೇವ ರವೀಂದ್ರನಾಥ ಠಾಗೋರರ ಅಣ್ಣ ಸತ್ಯೇಂದ್ರನಾಥ ಠಾಗೋರರು ಕಾರವಾರದಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದಾಗ ರವೀಂದ್ರನಾಥರು ಕಾರವಾರಕ್ಕೆ ಬಂದಿದ್ದರು. ಆಗ ಅವರಿಗೆ 22 ವರ್ಷ. ಕವಿ ರವೀಂದ್ರರು “ನನ್ನ ನೆನಪು’ ಕೃತಿಯಲ್ಲಿ ಕಾರವಾರದ ಕುರಿತು ಹೊಗಳಿದ್ದಾರೆ. ಕಾರವಾರ ಕೆನರಾ ಜಿಲ್ಲೆಯ ಕೇಂದ್ರ. ಅದು ಸಂಸ್ಕೃತ ಸಾಹಿತ್ಯದ ಹಿಮಾಲಯ ಪರ್ವತದಂತಹ ಪ್ರದೇಶ. ಒಂದು ಬೆಳದಿಂಗಳ ಸಂಜೆ ನಾವು ದೋಣಿಯಲ್ಲಿ ಹೊರಟೆವು ತಿರುಗಿ ಬರಬೇಕಾದರೆ ರಾತ್ರಿಯೇ ಗುಡ್ಡಗಳ ಮೇಲೆ ಕಾಡಿನಲ್ಲಿ ನಿದ್ರಿಸುವಂತೆ ಅನಿಸುತ್ತಿತ್ತು. ನಾವು ದೋಣಿಯನ್ನು ಕಡಲ ತೀರದಲ್ಲಿ ನಿಲ್ಲಿಸಿ ನಡೆಯಲು ಆರಂಭಿಸಿದೆವು. ಮರಳಲ್ಲಿ
ನಡೆಯುವಾಗ ಗುಡ್ಡಗಳು ನೀಲಿ ಆಕಾಶದಡಿ ಸುಖವಾಗಿ ಮಲಗಿ ನಿದ್ರಿಸಿವೆ ಅನಿಸಿತು. ನಮ್ಮ ನಿದ್ರೆ ಅದಕ್ಕಿಂತ ಗಾಢವಾದ ಕಾರವಾರದ ಸೌಂದರ್ಯದಲ್ಲಿ ಕಳೆದುಹೋಗಿತ್ತು. ನಾನು ಕಾರವಾರದಲ್ಲಿ “ಪ್ರಕೃತಿರ್ ಪ್ರತಿಯೋಧಾ’ ಎಂಬ ಕವಿತೆಯನ್ನು ಬರೆದೆ. ಅದರ ನಾಯಕ ಸನ್ಯಾಸಿ. ಆತ ಪ್ರಕೃತಿಯ ಮೇಲೆ ವಿಜಯ ಸಾಧಿಸಲು ತನ್ನ ಎಲ್ಲ ಬಂಧನಗಳಿಂದ ಮುಕ್ತಗೊಂಡು ಹೊರಡುತ್ತಾನೆ. ಆಗ ಪುಟ್ಟ ಹುಡುಗಿ (ಕಾರವಾರ)ಯೊಬ್ಬಳು ಅವನು ಲೌಕಿಕ ಬದುಕಿಗೆ ಮರಳುವಂತೆ ಮಾಡುತ್ತಾಳೆ. ಆ ಪ್ರೀತಿ (ಪ್ರಕೃತಿ)ಯಲ್ಲೇ ಆತ ಮುಕ್ತಗೊಳ್ಳುತ್ತಾನೆ. ಸ್ವತಂತ್ರವಾಗುತ್ತಾನೆ ಎಂದು ಆತ ಅರಿಯುತ್ತಾನೆ. ಪ್ರಕೃತಿಯ ಸೌಂದರ್ಯ ಎನ್ನುವುದು ಕೇವಲ ಕಾಲ್ಪನಿಕ ಅಲ್ಲ. ಅದು ಸತ್ಯ. ನಮ್ಮನ್ನು ನಾವು ಮರೆಯಬಹುದಾದಂತಹ ಅನುಭವವನ್ನು ಪ್ರಕೃತಿ ನೀಡುತ್ತದೆ ಎಂದು ನನಗೆ ಕಾರವಾರ ಬೀಚನಲ್ಲಿ ಕುಳಿತಾಗ ಅನಿಸಿತು. ನನ್ನ ಈ ಪ್ರಕೃತಿಯ ಮುಯ್ಯಿಯನ್ನು ಮುಂದಿನ ಎಲ್ಲ ಸಾಹಿತ್ಯ ಕೃತಿಗಳಿಗೆ ಮುನ್ನಡಿಯಾಗಿ ನೀವು ಕಾಣಬಹುದು
ಎಂದು ಬರೆದಿದ್ದಾರೆ. ರವೀಂದ್ರರ ಹೆಸರಿನಲ್ಲಿ ಸಮಿತಿ ನಡೆಸುತ್ತಿರುವ ಪ್ರವಾಸೋದ್ಯಮ ಅಭಿವೃದ್ಧಿ ಅವರಿಗೆ ಸಂದ ಶ್ರೇಷ್ಠ ಗೌರವ.
Advertisement
ಜಿಯು ಹೊನ್ನಾವರ